ನವದೆಹಲಿ: ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಈಗಾಗಲೇ 30 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಅವುಗಳಲ್ಲಿ ಕೆಲವು ಈಗಾಗಲೇ ಪ್ರಾಯೋಗಿಕ ಹಂತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ವಿಜ್ಞಾನಿಗಳು ಅಭಯ ನೀಡಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಜ್ಞಾನಿಕ ಕಾರ್ಯಪಡೆಯೊಂದಿಗೆ ಸಭೆ ನಡೆಸಿದ್ದು, ಕೊರೊನಾ ನಿರ್ಮೂಲನೆಗೆಲಸಿಕೆ ಅಭಿವೃದ್ಧಿ ಪಡಿಸುವುದು, ಔಷಧ ಅಭಿವೃದ್ಧಿ, ರೋಗ ಪತ್ತೆ ಹಾಗೂ ಪರೀಕ್ಷಾ ವಿಧಾನಗಳ ಕುರಿತು ಸಭೆಯಲ್ಲಿ ವಿವರ ಪಡೆದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಭಾರತೀಯ ಔಷಧ ತಯಾರಿಕಾ ಕಂಪನಿಗಳುಲಸಿಕೆ ಅಭಿವೃದ್ಧಿ ಸಂಶೋಧನೆಯಲ್ಲಿ ತೊಡಗಿವೆ ಎಂದುತಿಳಿಸಲಾಗಿದೆ.

ದೇಶದಲ್ಲಿ ಔಷಧ ಅಭಿವೃದ್ಧಿಯಲ್ಲಿ ಮೂರು ವಿಧಾನಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.ಪ್ರಥಮ ವಿಧಾನದಲ್ಲಿ ಈಗಾಗಲೇ ನೀಡಲಾಗುತ್ತಿರುವ ಔಷಧಿಗಳ ಮರುಹಂಚಿಕೆ. ಈ ವಿಭಾಗದಲ್ಲಿ ಕನಿಷ್ಟನಾಲ್ಕು ಔಷಧಗಳು ಪರೀಕ್ಷೆಗೆ ಒಳಗಾಗುತ್ತಿವೆ. ಎರಡನೆಯದಾಗಿ, ಪ್ರಯೋಗಾಲಯ ಪರಿಶೀಲನೆಗೆ ಪರಿಗಣಿಸಲಾಗಿರುವ ಉತ್ತಮ ಕಾರ್ಯಕ್ಷಮತೆಯುಳ್ಳ ಔಷಧಗಳ ಅಭಿವೃದ್ಧಿಗೆ ಚಾಲನೆ, ಮೂರನೆಯದಾಗಿ ಸಾಮಾನ್ಯ ರೋಗನಿರೋಧಕ ಗುಣಲಕ್ಷಣಗಳಸಸ್ಯದ ಸಾರಗಳು ಮತ್ತು ಉತ್ತನ್ನಗಳ ಪರಿಶೀಲನೆ ಎಂದು ಹೇಳಲಾಗಿದೆ.

ಕೊರೊನಾ ಸೋಂಕು ಸಂಬಂಧ ಸೋಂಕು ಪತ್ತೆ, ಪರೀಕ್ಷೆಗೆ ಸಂಬಂಧಿಸಿದಂತೆಹಲವು ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು,ಸ್ಟಾರ್ಟ್ ಅಪ್‌ಗಳು ನೂತನ ರೀತಿಯಲ್ಲಿ ಪರೀಕ್ಷೆ ನಡೆಸುತ್ತಿವೆ. ಈಪರೀಕ್ಷೆಗಳ ಸಾಮರ್ಥ್ಯವನ್ನು ದೇಶದಾದ್ಯಂತ ಪ್ರಯೋಗಾಲಯಗಳನ್ನುಜೋಡಿಸುವ ಯೋಜನೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.