ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ಮುಖಂಡ ಹಾಗೂ ಟ್ರಸ್ಟ್‌ನ ಮುಖ್ಯಸ್ಥ ಸದಾ ಸರವಣಕರ್,‘ದೇವಸ್ಥಾನದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಲಾಡುಗಳನ್ನು ವಿತರಿಸಲಾಗುತ್ತದೆ. ಲಾಡುಗಳನ್ನು ಸಂಗ್ರಹಿಸಿ ಇಡುವ ಜಾಗವೂ ಸ್ವಚ್ಛತೆಯಿಂದ ಕೂಡಿದೆ. ಆದರೆ, ವಿಡಿಯೊದಲ್ಲಿ ಕಾಣುವ ಸ್ಥಳ ಸ್ವಚ್ಛತೆಯಿಂದ ಕೂಡಿಲ್ಲ. ಇದು ಸಿದ್ಧಿವಿನಾಯಕ ದೇವಸ್ಥಾನದ್ದು ಅಲ್ಲ. ಬೇರೆ ಯಾವುದೋ ದೇಗುಲದಲ್ಲಿ ಚಿತ್ರೀಕರಿಸಿದ್ದರಿಬೇಕು’ ಎಂದು ಹೇಳಿದ್ದಾರೆ.