ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯನ್ನು ಹೂತು ಹಾಕುತ್ತೇವೆ: ಅಮಿತ್ ಶಾಗೆ ಶಿವಸೇನಾ ತಿರುಗೇಟು

ಮೈತ್ರಿ ಮಾಡಿಕೊಳ್ಳದಿದ್ದರೆ ಮಹಾರಾಷ್ಟ್ರದಲ್ಲಿ ಶಿವಸೇನಾ ಸೋಲಿಸಲಿದ್ದೇವೆ ಎಂದಿದ್ದ ಶಾ * ರಾಮದಾಸ್‌ ಕದಂ ತೀಕ್ಷ್ಣ ಪ್ರತಿಕ್ರಿಯೆ
Last Updated 9 ಜನವರಿ 2019, 11:17 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೂತು ಹಾಕುವುದಾಗಿ ಮಿತ್ರಪಕ್ಷ ಶಿವಸೇನಾ ಅಬ್ಬರಿಸಿದೆ.

‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರುವುದಿಲ್ಲ’ ಎಂದು ಸಚಿವ ಮತ್ತು ಶಿವಸೇನಾ ಹಿರಿಯ ನಾಯಕ ರಾಮದಾಸ್‌ ಕದಂ ಗುಡುಗಿದ್ದಾರೆ.

ಚುನಾವಣಾ ಪೂರ್ವ ಮೈತ್ರಿ ಏರ್ಪಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾವನ್ನು ಮಣ್ಣು ಮುಕ್ಕಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕದಂ, ‘ಮಹಾರಾಷ್ಟ್ರಕ್ಕೆ ಬಂದು ನಮಗೆ ಬೆದರಿಕೆ ಹಾಕಿದರೆ ಸುಮ್ಮನೆ ಬಿಡುವುದಿಲ್ಲ. ಮೋದಿ ಅಲೆಯ ಹೊರತಾಗಿಯೂ ಶಿವಸೇನಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 63 ಸ್ಥಾನ ಗೆದ್ದುಕೊಂಡಿದೆ ಎಂಬುವುದು ಬಿಜೆಪಿಗೆ ನೆನಪಿರಲಿ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮೇಲ್ಜಾತಿಯವರಿಗೆ ಮೀಸಲು ಕಲ್ಪಿಸಲು ಮುಂದಾಗಿದೆ ಎಂದು ಅವರು ಇದೇ ವೇಳೆ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT