ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಲಕ್ಷಕ್ಕೆ ನವಜಾತ ಶಿಶು ಮಾರಾಟ ಮಾಡಿದ ತಾಯಿ!

Published 8 ಮೇ 2023, 5:58 IST
Last Updated 8 ಮೇ 2023, 5:58 IST
ಅಕ್ಷರ ಗಾತ್ರ

ತಿರುವನಂತಪುರಂ: ಮೂರು ಲಕ್ಷ ರೂಪಾಯಿಗೆ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಕೇರಳ ತಂಪನೂರು ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ಮಹಿಳೆ ಕಂಜಿರಂಕುಲಂ ನಿವಾಸಿಯೆಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಏಪ್ರಿಲ್‌ 21ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಂಪನೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ವಿಚಾರವಾಗಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

‘ಮಗು ಏಪ್ರಿಲ್‌ ಮೊದಲ ವಾರದಲ್ಲಿ ಜನಿಸಿದ್ದು, ಹುಟ್ಟಿದ ನಾಲ್ಕು ದಿನಕ್ಕೆ ಮಾರಾಟ ಮಾಡಲಾಗಿದೆ. ಮೂರು ಲಕ್ಷ ರೂಪಾಯಿಗೆ ಮಗು ಮಾರಾಟವಾಗಿದ್ದು, ತಿರುವನಂತಪುರಂದ ದಂಪತಿ ಹಣಕೊಟ್ಟು ಮಗುವನ್ನು ಮಹಿಳೆಯಿಂದ ಪಡೆದಿದ್ದರು. ಈ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಬಂದಿದ್ದು, ಅವರು ನಮಗೆ ಮಾಹಿತಿ ನೀಡಿದ್ದಾರೆ‘ ಎಂದು ಪೊಲೀಸರು ಹೇಳಿದರು.

ಮಗುವಿನ ಸುರಕ್ಷತೆ ಮತ್ತು ಜವಾಬ್ದಾರಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT