ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನವಿಲ್ಲದೆ ಗರ್ಭಿಣಿಯನ್ನು 4 ಕಿ.ಮೀಟರ್‌ವರೆಗೂ ಹೊತ್ತು ಸಾಗಿದ ಸಂಬಂಧಿಕರು

Last Updated 7 ಸೆಪ್ಟೆಂಬರ್ 2018, 10:24 IST
ಅಕ್ಷರ ಗಾತ್ರ

ವಿಜಯವಾಡ: ಸರಿಯಾದ ರಸ್ತೆ ಮತ್ತು ವಾಹನ ಸಂಪರ್ಕ ಇಲ್ಲದೇ ಇರುವುದರಿಂದ ಗರ್ಭಿಣಿಯೊಬ್ಬರನ್ನು ಅವರ ಸಂಬಂಧಿಕರು ಕಾಡು ದಾರಿಯಲ್ಲೇ ನಾಲ್ಕು ಕಿ.ಮೀಟರ್‌ಗಳವರೆಗೆ ಹೊತ್ತುಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಚಿಂತಲ ಸಾಸೂರು ಎಂಬ ಬುಡಕಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಿಂದ ಎಂಟು ಕಿ.ಮೀಟರ್ ವ್ಯಾಪ್ತಿಯ ಒಳಗೆ ಯಾವುದೇ ಆಸ್ಪತ್ರೆ ಸೌಕರ್ಯವಿಲ್ಲ, ಹಾಗೇ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವು ಇಲ್ಲ ಎಂದುಚಿಂತಲ ಸಾಸೂರು ಗ್ರಾಮಸ್ಥರು ದೂರಿದ್ದಾರೆ.

ಗರ್ಭಿಣಿ ಮುತ್ತಮ್ಮ ಅವರನ್ನು ಬಿದಿರಿನ ಬೊಂಬಿಗೆ ಬಟ್ಟೆ ಕಟ್ಟಿ ಅದರಲ್ಲಿ ಕೂರಿಸಿಕೊಂಡು ಕಾಡಿನಲ್ಲಿ ಸುಮಾರು 4 ಕಿ. ಮೀಟರ್ ವರೆಗೂ ಸಾಗಿದ್ದಾರೆ. ದಾರಿ ಮಧ್ಯೆದಲ್ಲೇ ಹೆರಿಗೆ ಆಗಿದ್ದರಿಂದ ಮತ್ತೆ ಮನೆಗೆ ಮರಳಿದ್ದಾರೆ.ಅದೃಷ್ಟವಶಾತ್ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.

ಮಹಿಳೆಯನ್ನು ಅವರ ಸಂಬಂಧಿಕರು ಹೊತ್ತುಕೊಂಡು ಹೋಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಸೆಪ್ಟೆಂಬರ್‌ 4 ರಂದು ನಡೆದಿದೆ.

ಕಳೆದ ಜುಲೈ29ರಂದು ಇದೇ ಜಿಲ್ಲೆಯಲ್ಲೇ ಗರ್ಭಿಣಿ ಮಹಿಳೆಯನ್ನು 12 ಕಿ.ಮೀ ಹೊತ್ತುಕೊಂಡು ಸಾಗಿರುವ ಘಟನೆ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT