ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ ₹2.45 ಕೋಟಿ ದೋಚಿದ ಸೈಬರ್ ವಂಚಕರು

Published : 20 ಸೆಪ್ಟೆಂಬರ್ 2024, 12:04 IST
Last Updated : 20 ಸೆಪ್ಟೆಂಬರ್ 2024, 12:04 IST
ಫಾಲೋ ಮಾಡಿ
Comments

ಠಾಣೆ: ಸೈಬರ್ ವಂಚಕರು, 37 ವರ್ಷದ ಮಹಿಳೆಯನ್ನು ಡಿಜಿಟಲ್ ಬಂಧನದಲ್ಲಿಟ್ಟು ₹2.45 ಕೋಟಿ ದೋಚಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬರ್‌ನಾಥ್ ಪ್ರದೇಶದ ಮಹಿಳೆಯ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 14ರಂದು ಕೊರಿಯರ್ ಏಜೆನ್ಸಿಯ ನೌಕರ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ, ನೀವು ಇರಾನ್‌ಗೆ ಕಳುಹಿಸಿದ್ದ ಪಾರ್ಸಲ್ ತಿರಸ್ಕೃತಗೊಂಡಿದೆ ಎಂದು ಹೇಳಿದ್ದಾನೆ.

ಪಾರ್ಸಲ್‌ನಲ್ಲಿ ಮೂರು ಅವಧಿ ಮಿರಿದ ಪಾಸ್‌ಪೋರ್ಟ್‌ಗಳು, ಮೂರು ಕ್ರೆಡಿಟ್ ಕಾರ್ಡ್‌ಗಳು, 5 ಕೆ.ಜಿ ಔಷಧಿ, 450 ಗ್ರಾಂ ಮೆಫೆಡ್ರೋನ್ ಇತ್ತು. ಕೊರಿಯರ್ ಕಂಪನಿಯು ಈ ಬಗ್ಗೆ ಉದ್ದೀಪನ ಮದ್ದು ತಡೆ ಘಟಕಕ್ಕೆ(ಎನ್‌ಸಿಬಿ) ಮಾಹಿತಿ ನೀಡಿದೆ ಎಂದು ಆತ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದೇವೇಳೆ, ನಕಲಿ ಕ್ರೈಂ ಬ್ರಾಚ್‌ಗೆ ಕರೆ ವರ್ಗಾಯಿಸಲಾಗಿದೆ. ಅಧಿಕಾರಿಯ ಸೋಗಿನಲ್ಲಿ ಅಲ್ಲಿಂದ ಮಾತನಾಡಿದ ವ್ಯಕ್ತಿ, ಸ್ಕೈಪ್ ಡೌನ್ಲೋಡ್ ಮಾಡಲು ಮಹಿಳೆಗೆ ಸೂಚಿಸಿದ್ದಾನೆ. ಸ್ಕೈಪ್ ಕರೆ ವೇಳೆ ತನ್ನನ್ನು ತಾನು ಡಿಸಿಪಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯು, ಮಹಿಳೆಗೆ ನಕಲಿ ಪೊಲೀಸ್ ಐಡಿ, ದೂರಿನ ಪ್ರತಿ ಮತ್ತು ಆರ್‌ಬಿಐನಿಂದ ಬಂದಿದೆ ಎಂದು ಕೆಲ ದಾಖಲೆಗಳನ್ನು ತೋರಿಸಿದ್ದಾನೆ.

ಬಳಿಕ, ಮಹಿಳೆ ಮತ್ತು ಆಕೆಯ ತಾಯಿಯ ಬ್ಯಾಂಕ್ ಮಾಹಿತಿ ಪಡೆದ ವಂಚಕ, ಕೋಟ್ಯಂತರ ರೂಪಾಯಿ ಹಣ ದೋಚಿದ್ದಾನೆ.

ಈ ಸಂಬಂಧ, ಹೆಸರಿನ ಮೂಲಕ ಗುರುತಿಸಿಕೊಂಡ ಮೂವರು ಮತ್ತು ಸ್ಕೈಪ್ ಐಡಿ ಮೂಲಕ ಪರಿಚಯಿಸಿಕೊಂಡ ಮೂವರು ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT