ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಮಹಿಳಾ ನಕ್ಸಲ್‌ ಪೊಲೀಸರಿಗೆ ಶರಣು

Published 10 ಜನವರಿ 2024, 14:07 IST
Last Updated 10 ಜನವರಿ 2024, 14:07 IST
ಅಕ್ಷರ ಗಾತ್ರ

ಮಾಲಕಾನ್‌ಗಿರಿ: ಒಡಿಶಾದಲ್ಲಿ ಕಚ್ಚಾಬಾಂಬ್‌ ಸ್ಫೋಟ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳಾ ನಕ್ಸಲ್‌ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ ₹1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇವರನ್ನು ಉಂಗಿ ಮಾದ್ವಿ ಅಲಿಯಾಸ್‌ ರೋಸ್ನಿ ಎಂದು ಗುರುತಿಸಲಾಗಿದೆ.  ಛತ್ತೀಸಗಢದ ಸುಕ್ಮಾ ಜಿಲ್ಲೆಯ ಇವರು 2016ರಲ್ಲಿ ನಿಷೇಧಿತ ಸಿಪಿಐ (ಎಂ) ಸೇರ್ಪಡೆಯಾಗಿದ್ದರು. ಸದ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ (ಡಿಕೆಎಸ್ಐಡ್‌ಸಿ) ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ಇವರು ಕಳೆದ ಎಂಟು ವರ್ಷಗಳಿಂದ ಒಡಿಶಾದಲ್ಲಿ ಕನಿಷ್ಠ 48 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನೆರೆಯ ರಾಜ್ಯಗಳಲ್ಲೂ ಕೃತ್ಯ ಎಸಗಿದ್ದರು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ನಿತೇಶ್ ವಾಧ್ವಾನಿ ತಿಳಿಸಿದ್ದಾರೆ.

‘ಉಂಗಿ ಅವರು ನಕ್ಸಲ್‌ ಸಿದ್ಧಾಂತಗಳಿಂದ ಭ್ರಮನಿರಸನಗೊಂಡು ಈ ಹಿಂದೆಯೇ ಶರಣಾಗಲು ಬಯಸಿದ್ದರು. ಆದರೆ ಹಿರಿಯ ನಾಯಕರು ಅವರಿಗೆ ಅವಕಾಶ ನೀಡಿರಲಿಲ್ಲ. ಬಲವಂತವಾಗಿ ಅವರಿಂದ ಹಲವು ವಿಧ್ವಂಸಕ ಕೃತ್ಯಗಳನ್ನು ಮಾಡಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ರಾಜ್ಯ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅಲ್ಲದೆ ನಕ್ಸಲ್‌ವಾದದ ಹಿಂಸಾತ್ಮಕ ಹಾದಿಯ ನಿಷ್ಪ್ರಯೋಜಕತೆಯು ಅರಿವಿಗೆ ಬಂದಿದೆ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದೇನೆ ಎಂದು ಉಂಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT