ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ: ಅಪರಿಚಿತ ಯುವತಿಯ ದೇಹದ ಭಾಗಗಳು ರೈಲಿನಲ್ಲಿ ಪತ್ತೆ!

Published 9 ಜೂನ್ 2024, 9:45 IST
Last Updated 9 ಜೂನ್ 2024, 9:45 IST
ಅಕ್ಷರ ಗಾತ್ರ

ಇಂದೋರ್: ಅಪರಿಚಿತ ಯುವತಿಯ ದೇಹದ ಭಾಗಗಳನ್ನು ತುಂಡರಿಸಿ, ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇರಿಸಿರುವ ಘಟನೆ ಮಧ್ಯ‍ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೃತರನ್ನು 20 ರಿಂದ 25 ವರ್ಷದ ಯುವತಿ ಎಂದು ಗುರುತಿಸಲಾಗಿದೆ.

ಯುವತಿಯ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ ದೇಹದ ಮೇಲ್ಭಾಗವನ್ನು ಟ್ರಾಲಿಯಲ್ಲಿ, ಸೊಂಟದ ಕೆಳಭಾಗವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಇರಿಸಿದ್ದಾರೆ. ಆದರೆ ಕೈ -ಕಾಲುಗಳು ಪತ್ತೆಯಾಗಿಲ್ಲ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಉಸ್ತುವಾರಿ ಸಂಜಯ್ ಶುಕ್ಲಾ ಹೇಳಿದ್ದಾರೆ.

ಯುವತಿಯನ್ನು ಬೇರೆಡೆ ಕೊಲೆ ಮಾಡಿ, ಶವವನ್ನು ಅನೇಕ ಭಾಗಗಳಾಗಿ ಕತ್ತರಿಸಿ ರೈಲಿನಲ್ಲಿ ಇರಿಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬೇಡ್ಕರ್ ನಗರ-ಇಂದೋರ್‌ಗೆ ರೈಲು ಶನಿವಾರ ರಾತ್ರಿ ಪ್ರಯಾಣ ಬೆಳೆಸಿತ್ತು. ಈ ವೇಳೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ರೈಲನ್ನು ಸ್ವಚ್ಛಗೊಳಿಸುವಾಗ ಈ ಚೀಲಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಯುವತಿಯನ್ನು ಗುರುತಿಸುವ ಪ್ರಯತ್ನಗಳು ಮುಂದುವರಿದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT