ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸ್ತಿ‍ಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ: ದೆಹಲಿ ಪೊಲೀಸ್

Published : 29 ಮೇ 2023, 11:08 IST
Last Updated : 29 ಮೇ 2023, 11:08 IST
ಫಾಲೋ ಮಾಡಿ
Comments

ನವದೆಹಲಿ: ಜಂತರ್‌ಮಂತರ್‌ನಲ್ಲಿ ಕುಸ್ತಿಪಟುಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳವನ್ನು ಖಾಲಿ ಮಾಡಿದ ಮರುದಿನವೇ ದೆಹಲಿ ಪೊಲೀಸರಿಂದ ಈ ಹೇಳಿಕೆ ಹೊರಬಿದ್ದಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನವದೆಹಲಿ ಡಿಸಿಪಿ, ‘ಜಂತರ್‌ಮಂತರ್‌ನ ಸೂಚಿತ ಸ್ಥಳದಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಶಾಂತವಾಗಿ ನಡೆಯುತ್ತಿತ್ತು. ಭಾನುವಾರ ನಮ್ಮ ಸತತ ಮನವಿಯ ಹೊರತಾಗಿಯೂ ಕುಸ್ತಿಪಟುಗಳು ಕಾನೂನನ್ನು ಧಿಕ್ಕರಿಸಿದರು. ಹೀಗಾಗಿ ನಾವು ಪ್ರತಿಭಟನಾ ಸ್ಥಳವನ್ನು ಖಾಲಿಮಾಡಿ ಧರಣಿಯನ್ನು ಅಂತ್ಯಗೊಳಿಸಿದ್ದೇವೆ‘ ಎಂದು ಬರೆದುಕೊಂಡಿದ್ದಾರೆ.

‘ಭವಿಷ್ಯದಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಮಾಡಲು ಅನುಮತಿ ಕೇಳಿದ್ದೇ ಆದಲ್ಲಿ, ಜಂತರ್‌ಮಂತರ್‌ ಹೊರತುಪಡಿಸಿ ಬೇರೆ ಸ್ಥಳಗಳನ್ನು ಸೂಚಿಸಲಾಗುವುದು’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT