ಸುಲ್ತಾನಪುರ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

‘ಜಿತೇಂದ್ರ ತಿವಾರಿ ಅಲಿಯಾಸ್ ಜೀತು ಎಂಬಾತ ಪ್ರಧಾನಿಯ ಸಹೋದರನ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯು ನೀಡಿತ್ತು. ಈ ಮಾಹಿತಿಯ ಆಧಾರದ ಮೇಲೆ ತಿವಾರಿಯನ್ನು ವಿಕಾಸ್ ಭವನದ ಬಳಿ ಸೋಮವಾರ ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಭುಪೇಂದ್ರ ಸಿಂಗ್ ಅವರು ಹೇಳಿದರು.

‘ಗುಜರಾತ್‌ನ ಮಾಧವ್‌ಪುರದಲ್ಲಿ ಜನವರಿ 4 ರಂದು ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಪ್ರಸ್ತಾಪಿಸಿದ ಕಾರ್ಯಕ್ರಮವೊಂದರ ಪೋಸ್ಟರ್ ಅನ್ನು ತಿವಾರಿ ತನ್ನ ಕಾರಿನಲ್ಲಿ ಅಂಟಿಸಿಕೊಂಡಿದ್ದನು’ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ... ಡ್ರಗ್ಸ್ ಪ್ರಕರಣ: ದಾವೂದ್ ಇಬ್ರಾಹಿಂ ಸಹಚರ ಪರ್ವೇಜ್ ಖಾನ್ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.