ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಯುಟ್ಯೂಬರ್‌ ಸವುಕ್ಕು ಶಂಕರ್‌ ಬಂಧನ

Published 4 ಮೇ 2024, 16:28 IST
Last Updated 4 ಮೇ 2024, 16:28 IST
ಅಕ್ಷರ ಗಾತ್ರ

ಚೆನ್ನೈ: ಹಿರಿಯ ಮತ್ತು ಮಹಿಳಾ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಖ್ಯಾತ ಯುಟ್ಯೂಬರ್‌ ‘ಸವುಕ್ಕು’ ಶಂಕರ್‌ ಅವರನ್ನು ಕೊಯಮತ್ತೂರಿನ ಸೈಬರ್‌ಕ್ರೈಂ ಪೊಲೀಸರು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ. 

ಶಂಕರ್‌ ಅವರು ‘ಸವುಕ್ಕು ಮೀಡಿಯಾ’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದು ಒಂದು ವೆಬ್‌ಸೈಟ್‌ ಮತ್ತು ಯೂಟ್ಯೂಬ್‌ ಚಾನಲ್‌ ಹೊಂದಿದೆ. ಶಂಕರ್‌ ಅವರು ಡಿಎಂಕೆ ಸರ್ಕಾರದ ಕಟು ಟೀಕಾಕಾರಗಿದ್ದಾರೆ.

ಈಚೆಗೆ ಸಂದರ್ಶನವೊಂದನ್ನು ನಡೆಸಿಕೊಟ್ಟಿದ್ದ ಅವರು, ಮಹಿಳಾ ಪೊಲೀಸ್‌ ಅಧಿಕಾರಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಪೊಲೀಸ್‌ ಅಧಿಕಾರಿಗಳನ್ನು ‘ಸ್ಕೌಂಡ್ರಲ್ಸ್‌’ ಎಂದು ಕರೆದಿದ್ದರು. ಹೀಗಾಗಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ತಮಿಳುನಾಡು ಮಹಿಳಾ ದೌರ್ಜನ್ಯ ತಡೆ ವಿರೋಧಿ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ– 2000ದ ವಿವಿಧ ಸೆಕ್ಷನ್‌ಗಳ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT