ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ಹೆಸರು ಕೈ ಬಿಟ್ಟ ಆಕ್ಸ್‌ಫರ್ಡ್‌ ಸೊಮರ್‌ವಿಲ್ಲೆ ಕಾಲೇಜು

Last Updated 15 ಜುಲೈ 2017, 7:38 IST
ಅಕ್ಷರ ಗಾತ್ರ

ಲಂಡನ್‌: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸೊಮರ್‌ವಿಲ್ಲೆ ಕಾಲೇಜ್‌ನಲ್ಲಿ ಭಾರತ ಸರ್ಕಾರ ಸ್ಥಾಪಿಸಿರುವ ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ಹೆಸರಿನಿಂದ‌ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಕೈ ಬಿಡಲಾಗಿದೆ.

2013ರಲ್ಲಿ ಮನಮೋಹನ್‌ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಭಾರತ ಸರ್ಕಾರವು ಸೊಮರ್‌ವಿಲ್ಲೆ ಕಾಲೇಜ್‌ನಲ್ಲಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ₹ 25 ಕೋಟಿ ವೆಚ್ಚದಲ್ಲಿ ಈ ಅಧ್ಯಯನ ಕೇಂದ್ರವನ್ನು ಆರಂಭಿಸಿತ್ತು.

ಇಂದಿರಾ ಗಾಂಧಿ ಅವರು 1937ರಲ್ಲಿ ಆಕ್ಸ್‌ಫರ್ಡ್‌ ಸೊಮರ್‌ವಿಲ್ಲೆ ಕಾಲೇಜ್‌ನಲ್ಲಿ ಆಧುನಿಕ ಇತಿಹಾಸ ವ್ಯಾಸಂಗ ಮಾಡಿದ್ದರು. ಈ ನೆನಪಿಗಾಗಿ ಕಾಲೇಜಿನಲ್ಲಿ ಇಂದಿರಾ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗಿತ್ತು.

ಆದರೆ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಅಧ್ಯಯನ ಕೇಂದ್ರದ ಹೆಸರಿನಿಂದ ಇಂದಿರಾ ಅವರ ಹೆಸರನ್ನು ಕೈ ಬಿಡಲಾಗಿದೆ.

‘ಇಂದಿರಾ ಗಾಂಧಿ ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ (IGCSD) ಎಂಬ ಹೆಸರಿನಲ್ಲಿದ್ದ ಕೇಂದ್ರವನ್ನು ‘ಆಕ್ಸ್‌ಫರ್ಡ್‌ ಭಾರತೀಯ ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ (OICSD) ಎಂದು ಬದಲಿಸಲಾಗಿದೆ.

ಆದರೆ, ಈ ಹೆಸರಿನ ಬದಲಾವಣೆಯ ಹಿಂದೆ ಭಾರತ ಸರ್ಕಾರದಿಂದ ಯಾವುದೇ ಒತ್ತಡಗಳಿರಲಿಲ್ಲ ಎಂದು ಸೊಮರ್‌ವಿಲ್ಲೆ ಕಾಲೇಜು ಸ್ಪಷ್ಟನೆ ನೀಡಿದೆ.

‘ಅಧ್ಯಯನ ಕೇಂದ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಈಗಿರುವ ಹೊಸ ಕಟ್ಟಡ ನಿರ್ಮಾಣ ಯೋಜನೆ ಹಲವು ವರ್ಷಗಳ ಕನಸಾಗಿತ್ತು. ಈ ಕಟ್ಟಡ ನಿರ್ಮಾಣಕ್ಕೆ ಹಲವರು ದೇಣಿಗೆ ನೀಡಿದ್ದಾರೆ. ನಮ್ಮೆಲ್ಲಾ ಪರಿವರ್ತನೆಗಳ ಹಿಂದೆ ಒಳ್ಳೆಯ ಉದ್ದೇಶವೇ ಇದೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಅಲೈಸ್‌ ಪ್ರೊಚಸ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT