ನವದೆಹಲಿ(ಪಿಟಿಐ): ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ನಲ್ಲಿ ಮಹಿಳೆಯರ ಘನತೆಗೆ ಹಾನಿ ತರುವಂಥ ಹೇಳಿಕೆಗಳನ್ನು ಇಬ್ಬರು ವಕೀಲರು ನೀಡಿದ್ದಾರೆ ಎಂದು ಸಲ್ಲಿಸಲಾಗಿದ್ದ ದೂರು ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿರುವ ಸುಪ್ರೀಂ ಕೋರ್ಟ್ ಈ ಇಬ್ಬರು ವಕೀಲರಿಂದ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ದೆಹಲಿಯಲ್ಲಿ ಡಿ. 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಸಂದರ್ಶನ ಒಳಗೊಂಡ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ನಲ್ಲಿ ಮಹಿಳೆಯರ ಘನತೆಗೆ ಹಾನಿ ತರುವಂತ ಹೇಳಿಕೆಗಳನ್ನು ಇಬ್ಬರು ವಕೀಲರು ನೀಡಿದ್ದಾರೆ ಎಂದು ದೂರಿ ಮಹಿಳಾ ವಕೀಲರ ಸಂಘ ದಾವೆ ಹೂಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಇಬ್ಬರೂ ವಕೀಲರಿಂದ ವಿವರಣೆ ಬಯಸಿದೆ.

ವಾಸ್ತವವನ್ನು ತಿಳಿಯಲು ಮತ್ತು ಕಾನೂನಿನ ದೃಷ್ಟಿಯಿಂದ ಇಬ್ಬರ ಪ್ರತಿಕ್ರಿಯೆ ಅವಶ್ಯ ಎಂದು ಕೋರ್ಟ್ ಹೇಳಿದೆ. ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.