ಪಟ್ನಾ (ಐಎಎನ್ಎಸ್): ದೇಶದಲ್ಲಿ ಮತಾಂತರ ವಿವಾದ ಭುಗಿಲೆದ್ದಿರುವಾಗಲೇ ಬಿಹಾರದ ಎಂಟು ಬಡ ದಲಿತರು ಕೆಲವು ದಿನಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಬಿಹಾರದ ಮುಂಗೇರ ಜಿಲ್ಲೆಯ ಸಂಗ್ರಾಮಪುರ ವಲಯದ ರತನಪುರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಈ ಮತಾಂತರ ನಡೆದಿದೆ.
‘ಗೌರವಯುತ ಬದುಕಿಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದೇವೆ’ ಎಂದು ದಲಿತರು ತಿಳಿಸಿದ್ದಾರೆ.