ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 1ರಿಂದ ಜಿಎಸ್‌ಟಿ ಜಾರಿ

Last Updated 28 ಫೆಬ್ರುವರಿ 2015, 6:13 IST
ಅಕ್ಷರ ಗಾತ್ರ

ನವದೆಹಲಿ:  2016ರ ಏಪ್ರಿಲ್‌ 1 ರಿಂದ ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಬಜೆಟ್‌ ಮಂಡನೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಜೇಟ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳು ಒಟ್ಟು ಅಬಕಾರಿ ತೆರಿಗೆಯಲ್ಲಿ ಶೇ 42 ರಷ್ಟು ಅಂದರೆ ರೂ 5.24 ಲಕ್ಷ ಕೋಟಿಯಷ್ಟು ವರಮಾನ ಪಡೆಯಲಿವೆ ಎಂದರು. ಕಳೆದ ವರ್ಷ ಇದು 3.38 ಲಕ್ಷ ಕೋಟಿಯಷ್ಟಿತ್ತು.

ರಸ್ತೆ, ರೈಲು ನೀರಾವರಿ ವಲಯದಲ್ಲಿ ಹೂಡಿಕೆ ಉತ್ತೇಜಿಸಲು ತೆರಿಗೆ ರಹಿತ ಇನ್‌ಫ್ರಾಸ್ಟ್ರಕ್ಚರ್‌ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಗೆ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಮಂಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT