ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಇಂಡಿಯಾ ಬಿಕ್ಕಟ್ಟು: 30 ಪೈಲಟ್‌ಗಳ ವಜಾ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರ ಸೋಮವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ 30ಕ್ಕೂ ಹೆಚ್ಚು ಪೈಲಟ್‌ಗಳನ್ನು ಸೇವೆಯಿಂದ ವಜಾಗೊಳಿಸಿದೆ.

ಇದರಿಂದಾಗಿ ವಜಾಗೊಂಡಿರುವ ಪೈಲಟ್‌ಗಳ ಸಂಖ್ಯೆ 101ಕ್ಕೆ ಏರಿದೆ.  ವಜಾಗೊಂಡ ಪೈಲಟ್‌ಗಳು ಇಂಡಿಯನ್ ಪೈಲಟ್ ಗಿಲ್ಡ್ (ಐಪಿಜಿ)ಗೆ ಸೇರಿದ್ದು, ಬೇಡಿಕೆ ಈಡೇರಿಕೆಗಾಗಿ ಈ ಒಕ್ಕೂಟದ ಪೈಲಟ್‌ಗಳೇ ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ.

 ಈ ಮಧ್ಯೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸೋಮವಾರ ಬಿಕ್ಕಟ್ಟು ಶಮನಗೊಳಿಸಲು ಏರ್ ಇಂಡಿಯಾದ ಇತರ 10 ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದಾರೆ. ಮುಷ್ಕರ ನಿಲ್ಲಿಸುವಂತೆ `ಐಪಿಜಿ~ ಮನವೊಲಿಸುವಂತೆ ಆ ಸಂಘಟನೆಗಳ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ವಜಾಗೊಂಡ ಇಬ್ಬರು ಪೈಲಟ್‌ಗಳು ಸೇವೆಗೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT