ಹೈದರಾಬಾದ್ (ಐಎಎನ್‌ಎಸ್): ಜೈಪುರ ಸಾಹಿತ್ಯ ಉತ್ಸವದಲ್ಲಿ ವಿವಾದಾತ್ಮಕ ಸಾಹಿತಿ ಸಲ್ಮಾನ್ ರಶ್ದಿ ಅವರ ನಿಷೇಧಿತ `ದಿ ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಓದಿದ ಲೇಖಕರನ್ನು ತಕ್ಷಣವೇ ಬಂಧಿಸಬೇಕು ಎಂದು ಸಂಸದ ಹಾಗೂ ಮಜ್ಲೀಸ್-ಎ-ಇತೇಹದುಲ್ ಮುಸ್ಲಿಮೀ ಮುಖಂಡ ಅಸಾದುದ್ದೀನ್ ಓವಾಸಿ ಆಗ್ರಹಿಸಿದ್ದಾರೆ.

ಇಂತಹ ನಿಷೇಧಿತ ಕೃತಿಯ ಭಾಗಗಳನ್ನು ಪ್ರಚೋದಿಸುವ ಉದ್ದೇಶದಿಂದಲೇ ಓದಲಾಗಿದೆ. ಜತೆಗೆ ಜೈಪುರ ಸಾಹಿತ್ಯ ಉತ್ಸವ ಒಂದು ರೀತಿಯಲ್ಲಿ ಇಸ್ಲಾಂ ವಿರೋಧಿ ವೇದಿಕೆಯಾಗಿಯೂ ಮಾರ್ಪಟ್ಟಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಲೇಖಕರಾದ ಹರಿ ಕುಂಜ್ರು, ಅಮಿತಾವ್ ಕುಮಾರ್, ಜಿತ್ ಥಾಯಿಲ್ ಹಾಗೂ ರುಚಿರ್ ಜೋಷಿ ಅವರು ರಶ್ದಿ ಅವರ ಈ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದ ಮೊದಲ ದಿನ ಓದಿದ್ದರು. ಸಂಘಟಕರು ಇದನ್ನು ತಡೆಯಲು ಯತ್ನಿಸಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಲೇಖಕರ ವಿರುದ್ಧ ಕ್ರಮಕ್ಕೆ ಒತ್ತಾಯ (ಜೈಪುರ ವರದಿ): ನಿಷೇಧಿತ `ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದಲ್ಲಿ ವಾಚನ ಮಾಡಿದ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಂಘಟನೆಗಳು ಸಾಹಿತ್ಯ ಉತ್ಸವ ಸಂಘಟಕರನ್ನು ಒತ್ತಾಯ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.