ನವದೆಹಲಿ: ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸ್ಸು ಮಾಡಿದ್ದರೂ ನೇಮಕಾತಿ ಪ್ರಕ್ರಿಯೆ ನಡೆಸದಿರುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಅಲಹಾಬಾದ್ ಹೈ ಕೋರ್ಟ್‌ನಲ್ಲಿ ಅಗತ್ಯವಿರುವ ಸ್ಥಾನಗಳ ಭರ್ತಿಗಾಗಿ ಜನವರಿಯಲ್ಲಿ 8 ಹಾಗೂ ಆಗಸ್ಟ್‌ನಲ್ಲಿ 27 ನ್ಯಾಯಮೂರ್ತಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು.

ಒಟ್ಟು 35 ನ್ಯಾಯಮೂರ್ತಿಗಳ ನೇಮಕಾತಿ ಅಧಿಸೂಚನೆ ಈವರೆಗೂ ಪ್ರಕಟಿಸಲಾಗಿಲ್ಲ. ಪ್ರಸ್ತುತ ಅಲಹಾಬಾದ್ ಹೈ ಕೋರ್ಟ್ ನಲ್ಲಿ 77 ನ್ಯಾಯಮೂರ್ತಿಗಳಿದ್ದಾರೆ. ಇಲ್ಲಿ 160 ನ್ಯಾಯಮೂರ್ತಿಗಳ ಅವಶ್ಯಕತೆಯಿದ್ದು, ಶೇ.50ಕ್ಕೂ ಕಡಿಮೆ ಸಂಖ್ಯಾಬಲದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆ ವಿಳಂಬದಿಂದಾಗಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 24 ಹೈ ಕೋರ್ಟ್‌ಗಳಲ್ಲಿ ಸುಮಾರು 40 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ನೇಮಕಾತಿ ಪ್ರಕ್ರಿಯೆ ವಿಳಂಬಿಸದಂತೆ ಕೋರ್ಟ್ ತಾಕೀತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.