ನವದೆಹಲಿ (ಪಿಟಿಐ): ದೇಶದ ಸಾರವನ್ನು ಸೆರೆಹಿಡಿಯುವ ಜಾತಿ ಹಾಗೂ ಚುನಾವಣೆಗಳು ಸಮಕಾಲೀನ ಭಾರತವನ್ನು ನಿರೂಪಿಸುತ್ತವೆ ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಇತಿಹಾಸಕಾರ ರಾಮಚಂದ್ರ ಗುಹಾ, ಈ ಅವಳಿ ಸಂಗತಿಗಳು ಆಧುನಿಕ ಇತಿಹಾಸಕಾರರಿಗೆ ಈಗಲೂ ಅಪರಿಚಿತ ಕ್ಷೇತ್ರಗಳಾಗಿ ಉಳಿದಿವೆ ಎಂದು ವಿಷಾದಿಸಿದ್ದಾರೆ.

ಪೆಂಗ್ವಿನ್ ಸ್ಪ್ರಿಂಗ್ ಫಿವರ್ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಅವರು ಮಂಗಳವಾರ ಸಂಜೆ ಮಾತನಾಡಿದರು.

‘ಜಾತಿ ಹಾಗೂ ಚುನಾವಣೆಗಳು ಭಾರತೀಯರಾದ ನಮ್ಮ ಜೀವನದ ಎರಡು ಮುಖ್ಯ ಸಂಗತಿಗಳಾಗಿವೆ. ಇಷ್ಟಾದರೂ ಅವು ಹೇಗೆ ನಡೆಯುತ್ತಿವೆ ಎಂಬುದರ ಕುರಿತ ಐತಿಹಾಸಿಕ ಕಾಲಾನುಕ್ರಮದ ದೃಷ್ಟಿಕೋನ ನಮಗಿಲ್ಲ. ಸ್ವತಂತ್ರ ಭಾರತದಲ್ಲಿ ಎದ್ದುಕಾಣುವ ಶೇಖ್ ಅಬ್ದುಲ್ಲಾ, ಇ.ಎಂ.ಎಸ್ ನಂಬೂದರಿಪಾದ ಅಥವಾ ವೈ.ಬಿ.ಚವಾಣ್ ಅವರಂಥವರ ಜೀವನ ಚರಿತ್ರೆಗಳು ನಮ್ಮಲ್ಲಿಲ್ಲ’ ಎಂದು ವಿಷಾದಿಸಿದ್ದಾರೆ.

‘ಗಡಿಯಾರ ರಾತ್ರಿ 12ಗಂಟೆ ತೋರಿಸಿದರೆ ಸಾಕು, ಇತಿಹಾಸ ಮುಗಿಯಿತು ಹಾಗೂ ರಾಜ್ಯಶಾಸ್ತ್ರ ಆರಂಭವಾಗಿಯಿತು ಎನ್ನುವುದು ದೇಶದ ವಿಚಿತ್ರ ಸವಾಲು. ಇದು ಇತಿಹಾಸದ ಕ್ಷೇತ್ರವಲ್ಲ ಬದಲಾಗಿ ರಾಜ್ಯಶಾಸ್ತ್ರದ ಕ್ಷೇತ್ರ ಎಂದು 1947ರೋತ್ತರ ಕಾಲದಲ್ಲಿ ನಾವು ಹೇಳುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.