ನವದೆಹಲಿ (ಏಜೆನ್ಸಿಸ್): ಏಳು ಜನ ಪ್ರಯಾಣಿಕರಿದ್ದ ಏರ್ ಆ್ಯಂಬುಲೆನ್ಸ್ ವಿಮಾನ ದೆಹಲಿಯ ಹೊರವಲಯದಲ್ಲಿ ಪತನವಾಗಿದ್ದು ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರದ ಪಟ್ನಾದಿಂದ ತೆರಳಿದ್ದ ವಿಮಾನ ನವದೆಹಲಿ ಹೊರ ವಲಯದ ನಜಾಫರ್ ಗ್ರಾಮದಲ್ಲಿ ಪತನವಾಗಿದೆ. ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ವಿಮಾನ ದುರಂತಕ್ಕಿಡಾಗಿದೆ.
ಘಟನೆ ಸಂಬಂಧ ಹೆಚ್ಚಿನ ವರದಿಗಳು ಬರಬೇಕಿದೆ.