ಮೊಗಾ, (ಪಂಜಾಬ್): ಜಿಲ್ಲೆಯ ನಿಹಾಲ್ ಸಿಂಗ್ ವಾಲಾ ಎಂಬಲ್ಲಿ ಆಯೋಜಿಸಿದ್ದ ನಾಯಿಗಳ ಕಾಳಗದ ಪ್ರದರ್ಶನವನ್ನು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರ ಸೂಚನೆಯ ಮೇರೆಗೆ ಪೊಲೀಸರು ತಡೆ ಹಿಡಿದಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಆಯೋಜಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಸಚಿವರ ಕಚೇರಿ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಸೂಚನೆ ಬಂದಿದ್ದು, ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತರಬೇತಿ ಪಡೆದ ವಿವಿಧ ತಳಿಯ ನಾಯಿಗಳ ನಡುವೆ ಕಾಳಗ ಆಯೋಜಿಸಲಾಗಿತ್ತು.