ನವದೆಹಲಿ: ‘ಶಿಕ್ಷಣ ಹಕ್ಕು ಕಾಯ್ದೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಇಲ್ಲವೇ ಮಾನ್ಯತೆ ರದ್ದತಿಯ ಕ್ರಮ ಎದುರಿಸಿ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ಶಾಲೆಗಳಿಗೆ ಎಚ್ಚರಿಕೆ ನೀಡಿದೆ.

‘ಕಾಯ್ದೆಯಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಕೇಂದ್ರೀಯ ಪಠ್ಯಕ್ರಮದ ಕೆಲವು ಶಾಲೆಗಳು ಕಡೆಗಣಿಸಿರುವುದು ಮತ್ತು ಆಯಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆಯದೆಯೇ ಶಾಲೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಿ ಎಂದು ಪದೇ–ಪದೇ ಎಚ್ಚರಿಕೆ ನೀಡಿದ್ದರೂ ಅವನ್ನು ಕಡೆಗಣಿಸಲಾಗಿದೆ’ ಎಂದು ಶಾಲೆಗಳಿಗೆ ರವಾನಿಸಿರುವ ಪತ್ರದಲ್ಲಿ ಸಿಬಿಎಸ್ಇಹೇಳಿದೆ.

‘ಆಯಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆಯದಿದ್ದರೆ, ತಕ್ಷಣವೇ ಅದನ್ನು ಪಡೆದುಕೊಳ್ಳಬೇಕು. ಶಾಲೆಯ ಕಟ್ಟಡ ರಾಷ್ಟ್ರೀಯ ಕಟ್ಟಡ ಸಂಹಿತೆಗೆ ಅನುಗುಣವಾಗಿರಬೇಕು’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.