ನವದೆಹಲಿ (ಪಿಟಿಐ): ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೌಕಾ ದಳದ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಪಡೆಯ ತನಿಖಾ ಮಂಡಳಿ ಶಿಫಾರಸು ಮಾಡಿದೆ.
ನೌಕಾ ದಳದ ತಾಂತ್ರಿಕ ವಿಭಾಗದ ಈ ನಾಲ್ವರು ಅಧಿಕಾರಿಗಳು ತಮ್ಮ ಖಾಸಗಿ ಕಂಪ್ಯೂಟರ್ ಬಳಸಿಕೊಂಡು ಫೇಸ್ಬುಕ್ನಲ್ಲಿ ವರ್ಗೀಕೃತ ಮಾಹಿತಿ ವಿನಿಮಯ ಮಾಡಿಕೊಂಡಿದ್ದು ಪತ್ತೆಯಾಗಿದೆ ಎಂದು ನೌಕಾ ದಳದ ಮೂಲಗಳು ಹೇಳಿವೆ.