ನವದೆಹಲಿ (ಪಿಟಿಐ): ಲೋಕಪಾಲ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಗೆ ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲೇ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿರುವ ಸುಳಿವು ಕಂಡುಬಂದಿವೆ.
ನಡಾವಳಿಯ ಪ್ರಕಾರ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ಆದರೆ ಸದ್ಯ, ಪ್ರತಿಪಕ್ಷ ನಾಯಕ ಸ್ಥಾನ ಯಾರಿಗೆ ನೀಡಬೇಕೆಂಬುದು ನಿರ್ಧಾರವಾಗಿಲ್ಲ. ಲೋಕಪಾಲ ನೇಮಕಾತಿ ಶೋಧನಾ ಸಮಿತಿ ನಿಯಮಾವಳಿಯನ್ನು ಶೀಘ್ರವೇ ಬದಲಿಸಲಾಗುವುದು. ಅದರ ಸಂಯೋಜನೆಯನ್ನು ಅಂತಿಮಗೊಳಿಸಲು ಶೀಘ್ರವೇ ಆಯ್ಕೆ ಸಮಿತಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.