ನವದೆಹಲಿ: ಹಿರಿಯ ಪತ್ರಕರ್ತ ಹಾಗೂ ‘ಪ್ರಜಾವಾಣಿ’ ಅಂಕಣಕಾರ ಎ.ಸೂರ್ಯಪ್ರಕಾಶ್ ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ನೇಮಿಸಲಾಗಿದೆ. ಇವರ ಸೇವಾವಧಿ 2020ರ ಫೆಬ್ರುವರಿ 8ರವರೆಗೆ ಇರುತ್ತದೆ.

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನೇತೃತ್ವದ ಸಮಿತಿಯು ಪ್ರಕಾಶ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಅದರ ಅನ್ವಯ, ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಶುಕ್ರವಾರ ಆದೇಶ ಪ್ರಕಟಿಸಿದೆ.

ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊ ಕಾರ್ಯನಿರ್ವಹಣೆಯ ಮೇಲುಸ್ತುವಾರಿಯನ್ನು ಪ್ರಸಾರಭಾರತಿ ನೋಡಿಕೊಳ್ಳುತ್ತಿದೆ.

ಮಾಹಿತಿ ಹಾಗೂ ಪ್ರಸಾರ ಖಾತೆ ಇಲಾಖೆಯ ಕಾರ್ಯದರ್ಶಿ ಎನ್.ಕೆ.ಸಿನ್ಹಾ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಸೇರಿದಂತೆ ಇನ್ನಿಬ್ಬರು ಸದಸ್ಯರನ್ನು ಒಳಗೊಂಡ ಸಮಿತಿಯು ಸೂರ್ಯಪ್ರಕಾಶ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.