ನವದೆಹಲಿ : ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಡೋದರಾದ ಡಿಪಿಐಎಲ್ ಪ್ರೈ. ಲಿ. ಕಂಪನಿಗೆ ಸೇರಿದ ₹1,122 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ. ಈ ಆಸ್ತಿಯಲ್ಲಿ ಪವನ ವಿದ್ಯುತ್ ಘಟಕ ಮತ್ತು ನಿರ್ಮಾಣ ಹಂತದಲ್ಲಿರುವ ಹೋಟೆಲ್ ಸೇರಿವೆ.