ನವದೆಹಲಿ: ಮಹಾಭಾರತ ಕಾಲದಲ್ಲೇ ಇಂಟರ್ನೆಟ್, ವೈಫೈ ಇತ್ತು; ಡಯಾನಾ ಹೇಡನ್ ವಿಶ್ವ ಸುಂದರಿ ಎನ್ನುವುದು ಕೇವಲ ಜೋಕ್ ಎಂಬ ಹೇಳಿಕೆಗಳನ್ನು ನೀಡಿ ಇತ್ತೀಚೆಗೆ ದೇಶದಾದ್ಯಂತ ಟೀಕೆಗೆ ಗುರಿಯಾಗಿದ್ದ ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಇದೀಗ ಮೆಕಾನಿಕಲ್ ಎಂಜಿನಿಯರ್ಗಳು ನಾಗರಿಕ ಸೇವೆಗಳಿಗೆ ಸೇರಬಾರದು ಎನ್ನುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ನಲ್ಲಿ ಬಿಪ್ಲಬ್ ಹೇಳಿಕೆ ಬಗ್ಗೆ ಆಕ್ಷೇಪ ಹಾಗೂ ಅಪಹಾಸ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಿಪ್ಲಬ್ ಹೇಳಿದ್ದೇನು?: ನಾಗರಿಕ ಸೇವಾ ದಿವಸದ ಅಂಗವಾಗಿ ಶುಕ್ರವಾರ ಅಗರ್ತಲಾದ ಪ್ರಜ್ಞಾ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಪ್ಲಬ್, ‘ಮೆಕಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆಯುಳ್ಳವರು ನಾಗರಿಕ ಸೇವಾ ಕ್ಷೇತ್ರ ಆಯ್ಕೆ ಮಾಡಬಾರದು. ಸಿವಿಲ್ ಎಂಜಿಯರ್ಗಳಲ್ಲಿ ಸಮಾಜವನ್ನು ನಿರ್ಮಾಣ ಮಾಡಬಲ್ಲ ಜ್ಞಾನವಿದೆ. ಆಡಳಿತದಲ್ಲಿರುವವರು ಸಮಾಜವನ್ನು ಕಟ್ಟಬೇಕು’ ಎಂದು ಹೇಳಿದ್ದರು.
‘ಸಿವಿಲ್ ಎಂಜಿನಿಯರ್ಗಳು ನಾಗರಿಕ ಸೇವಾ ಕ್ಷೇತ್ರ ಪ್ರವೇಶಿಸಿದರೆ ಅವರು ಕಟ್ಟಡ ನಿರ್ಮಾಣ ಯೋಜನೆಗಳಿಗೆ ಸಹಾಯ ಮಾಡಬಲ್ಲರು. ಮೆಕಾನಿಕಲ್ ಎಂಜಿನಿಯರ್ಗಳಿಂದ ಅದು ಸಾಧ್ಯವಾಗದು. ಹಿಂದೆಲ್ಲ ಕಲಾ ವಿಭಾಗದಿಂದ ಬಂದವರು ನಾಗರಿಕ ಸೇವಾ ಪರೀಕ್ಷಗಳನ್ನು ಬರೆದು ಆಯ್ಕೆಯಾಗುತ್ತಿದ್ದರು. ನಂತರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಲಿತವರೂ ಪರೀಕ್ಷೆ ಬರೆಯಲಾರಂಭಿಸಿದರು’ ಬಿಪ್ಲಬ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಕಪಿಲ್ ದೇವ್ ಹೆಸರನ್ನು ಉದಾಹರಿಸಿದ ಬಿಪ್ಲಬ್, ನಾಗರಿಕ ಸೇವಾ ಕ್ಷೇತ್ರದಲ್ಲಿರುವವರು ಆಲ್ರೌಂಡರ್ಗಳಾಗಿರಬೇಕು ಎಂದೂ ಹೇಳಿದ್ದಾರೆ.
ಟ್ವಿಟರ್, ಫೇಸ್ಬುಕ್ನಲ್ಲಿ ವ್ಯಂಗ್ಯ: ಬಿಪ್ಲಬ್ ಹೇಳಿಕೆಗೆ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ವ್ಯಂಗ್ಯ, ಹಾಸ್ಯಮಿಶ್ರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
‘ತ್ರಿಪುರದ ಜನರೇ ನಿಮಗೆ ಒಳ್ಳೆಯದಾಗಲಿ. ಇವರನ್ನು ಆಯ್ಕೆ ಮಾಡಿದ್ದಕ್ಕೆ’ ಎಂದು Unofficial: Subramanian Swamy ಹೆಸರಿನ ಪೇಸ್ಬುಕ್ ಖಾತೆಯೊಂದರಲ್ಲಿ ವ್ಯಂಗ್ಯವಾಡಲಾಗಿದೆ. ಈ ಸಂದೇಶ 2,900ಕ್ಕೂ ಹೆಚ್ಚು ಶೇರ್ ಆಗಿದ್ದು ವೈರಲ್ ಆಗಿದೆ.
ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಡೇನಿಯಲ್ ಸಜ್ಜದ್ ಎಂಬುವವರು ‘ಭಾರತೀಯ ವಿದೇಶಾಂಗ ವ್ಯವಹಾರಗಳ ಸೇವೆಗೆ ವಿದೇಶೀಯರೇ ಅರ್ಜಿ ಸಲ್ಲಿಸಬೇಕು’ ಎಂದು ಪೋಸ್ಟ್ ಮಾಡಿದ್ದಾರೆ.
ಸ್ವನಿರ್ಭರ್ ಮಜುಮ್ದಾರ್ ಎಂಬುವವರು, ‘ಗೌರವಾನ್ವಿತ ಬಿಪ್ಲಬ್ ಅವರಿಂದ ಹ್ಯಾಟ್ರಿಕ್’ ಎಂದು ಟ್ವೀಟ್ ಮಾಡಿ ಹಿಂದಿನ ವಿವಾದಿತ ಹೇಳಿಕೆಗಳನ್ನೂ ಪ್ರಕಟಿಸಿದ್ದಾರೆ.
Hat-trick by our honorable #BiplabDeb pic.twitter.com/cOxkA66ldT
ಇನ್ನೊಂದು ಟ್ವಿಟರ್ ಖಾತೆಯಲ್ಲಿ, ‘ಬೆಕ್ಕಿನಮರಿಗಳು ಮಾತ್ರ CAT ಪರೀಕ್ಷೆ ಬರೆಯಲು ಆಯ್ದಯಕೊಳ್ಳಬೇಕು’ ಎಂದು ಟ್ವೀಟ್ ಮಾಡಲಾಗಿದೆ.
#BiplabDeb #Tripura
‘ಯಾರಾದರೂ ದಯಮಾಡಿ ಇವರಿಗೆ ಮಾಡಲು ಏನಾದರೂ ಕೆಲಸ ಕೊಡಿ. ಇವರು ಮುಖ್ಯಮಂತ್ರಿಯಾಗಬೇಕಿತ್ತೇ? ದಯಮಾಡಿ ನಿಮ್ಮ ಕೆಲಸ ಮಾಡಿ #BiplabDeb’ ಎಂದು ಅಂಜಲಿ ಇಸ್ತ್ವಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Someone please give this man something to do...wait!! Isn’t he supposed to b a CM. Plz do ur job #BiplabDeb https://t.co/IRIjtYAsO7
‘ಡಯಾನಾ ಹೇಡನ್ ವಿಶ್ವ ಸುಂದರಿ ಎನ್ನುವುದು ಜೋಕ್ ಎಂದಿದ್ದ ಬಿಪ್ಲಬ್’
ಸುದ್ದಿ ಓದಿ... ಡಯಾನಾ ಹೇಡನ್ ವಿಶ್ವ ಸುಂದರಿ ಎನ್ನುವುದು ಜೋಕ್: ತ್ರಿಪುರ ಸಿಎಂ ಹೇಳಿಕೆ
‘ಮಹಾಭಾರತದ ಕಾಲದಲ್ಲಿಯೇ ಇಂಟರ್ನೆಟ್ ಇತ್ತು’
ಸುದ್ದಿ ಓದಿ... ಅದು ‘ಇಂದ್ರನೆಟ್’; ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾಸ್ತ್ರ
ಇನ್ನಷ್ಟು...
* ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್ನೆಟ್,ಸ್ಯಾಟಲೈಟ್ ಇತ್ತು: ತ್ರಿಪುರಾ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
#BiplabDeb #Tripura
‘ಡಯಾನಾ ಹೇಡನ್ ವಿಶ್ವ ಸುಂದರಿ ಎನ್ನುವುದು ಜೋಕ್ ಎಂದಿದ್ದ ಬಿಪ್ಲಬ್’
ಸುದ್ದಿ ಓದಿ... ಡಯಾನಾ ಹೇಡನ್ ವಿಶ್ವ ಸುಂದರಿ ಎನ್ನುವುದು ಜೋಕ್: ತ್ರಿಪುರ ಸಿಎಂ ಹೇಳಿಕೆ
‘ಮಹಾಭಾರತದ ಕಾಲದಲ್ಲಿಯೇ ಇಂಟರ್ನೆಟ್ ಇತ್ತು’
ಸುದ್ದಿ ಓದಿ... ಅದು ‘ಇಂದ್ರನೆಟ್’; ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾಸ್ತ್ರ
ಇನ್ನಷ್ಟು...
* ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್ನೆಟ್,ಸ್ಯಾಟಲೈಟ್ ಇತ್ತು: ತ್ರಿಪುರಾ ಮುಖ್ಯಮಂತ್ರಿ