ನವದೆಹಲಿ (ಪಿಟಿಐ): ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋ ರೈಲಿನಲ್ಲಿ ಶನಿವಾರ ಪ್ರಯಾಣಿಸಿದರು.ರಾಷ್ಟ್ರೀಯ ಗುಪ್ತಚರ ಅಕಾಡೆಮಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮೋದಿ, ದೌಲಾಕೌನ್‌ನಿಂದ ದ್ವಾರಕಾ ವರೆಗೂ ಮೆಟ್ರೋದಲ್ಲಿ ಸಂಚರಿಸಿದರು.

ಭದ್ರತೆ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಪ್ರಧಾನಿ ಅವರು ಮೆಟ್ರೋ ಪ್ರಯಾಣದ ಮೊರೆ ಹೋಗಿದ್ದರು.

ಮೆಟ್ರೋ ಪ್ರಯಾಣದ ಬಗ್ಗೆ ಮೋದಿ ಅವರು ಟ್ವೀಟ್ಟರ್‌ನಲ್ಲಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

‘ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಂತೆ ಶ್ರೀಧರನ್ ಅವರು ತುಂಬಾ ಸಲ ಹೇಳುತ್ತಿದ್ದರು. ಇಂದು ದ್ವಾರಕಾಗೆ ತೆರಳುವಾಗ ಆ ಅವಕಾಶ ದೊರೆಕಿದ್ದು ನನಗೆ ತುಂಬಾ ಆನಂದವಾಯಿತು, ದೆಹಲಿ ಮೆಟ್ರೋ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇ. ಶ್ರೀಧರನ್ ಅವರು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂಆರ್‌ಸಿ) ಮಾಜಿ ಮುಖ್ಯಸ್ಥರು. ಜತೆಗೆ ಅವರು ‘ಮೆಟ್ರೋ ಮ್ಯಾನ್’ ಎಂದೇ ಹೆಸರುವಾಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.