ನವದೆಹಲಿ (ಐಎಎನ್ಎಸ್): 2011-12 ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿರುವ ಸುಂಕಗಳ ಏರಿಳಿಕೆ ಪರಿಣಾಮವಾಗಿ ಕೆಲವು ವಸ್ತುಗಳ ಬೆಲೆಗಳಲ್ಲಿ ಏರಿಳಿತವಾಗುವ ಸಂಭವವಿದೆ. ಅವುಗಳ ಪಟ್ಟಿ ಹೀಗಿದೆ.
ಅಗ್ಗವಾದ ವಸ್ತುಗಳು
* ಆಟೋಮೊಬೈಲಸ್ (ಹೈಬ್ರಿಡ್ ಎಲೆಕ್ಟ್ರಿಕಲ್ ವಾಹನಗಳು ಹಾಗೂ ಸಿಎನ್ ಜಿ
* ಕಡಿಮೆ ವೆಚ್ಚದ ಗೃಹ ಸಾಲಗಳು
* ಡಯಾಪರ್ ಹಾಗೂ ಸ್ಯಾನಿಟರಿ ನ್ಯಾಪಕಿನ್ ಗಳು
* ಹೋಮಿಯಪಥಿ ಔಷಧಗಳು
* ಅಗರಬತ್ತಿಗಳು
* ಸೌರದೀಪಗಳು
* ಎಲ್ಇಡಿ ದೀಪಗಳು
* ಕಚ್ಚಾ ರೇಷ್ಮೆ ವಸ್ತುಗಳು
* ಕೃಷಿ ಉಪಕರಣಗಳು
ತುಟ್ಟಿಯಾದ ವಸ್ತುಗಳು
* ಹವಾನಿಯಂತ್ರಿತ ಆಸ್ಪತ್ರೆಗಳಲ್ಲಿನ ಚಿಕಿತ್ಸೆ.
* ಮದ್ಯ ಮಾರಾಟ ಮಾಡುವ ರೆಸ್ಟೋರೆಂಟ್ ಗಳಲ್ಲಿನ ಊಟ
* ದಿನವೊಂದಕ್ಕೆ ಸಾವಿರ ರೂ ಮೀರುವ ಹೋಟೆಲ್ ಬಾಡಿಗೆ ವೆಚ್ಚದ ಮೇಲೆ ಅಧಿಕ ತೆರಿಗೆ
* ಕಾನೂನು ಸೇವೆಗಳು
* ವಿಮಾನಯಾನ
* ಪ್ರತಿಷ್ಠಿತ ಕಂಪೆನಿಗಳ ಆಭರಣಗಳು
* ಪ್ರತಿಷ್ಠಿತ ಕಂಪೆನಿಗಳ ಉಡುಪುಗಳು
ದರದಲ್ಲಿ ಯಾವುದೇ ಬದಲಾವಣೆ ಕಾಣದ ವಸ್ತುಗಳು:
* ಸಿಗರೇಟ್
* ಬಳಕೆದಾರರ ವಸ್ತುಗಳು (ರೆಫಿಜೆರೇಟರ್, ಟಿವಿ, ವಾಷಿಂಗ್ ಮಿಷಿನ್ ಇತ್ಯಾದಿ)