ನವದೆಹಲಿ, (ಪಿಟಿಐ): ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಕನಸಿನ ಕನ್ಯೆ, ಬಾಲಿವುಡ್ ನಟಿ ಹೇಮಾ ಮಾಲಿನಿ ಮಂಗಳವಾರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಂತರಾಷ್ಟ್ರೀಯ ಮಹಿಳಾ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
63 ವರ್ಷದ ಹೇಮಾ, ಎರಡನೇ ಬಾರಿಗೆ ಮೇಲ್ಮನ ಪ್ರವೇಶಿದ್ದಾರೆ. ಈ ಹಿಂದೆ 2003 ರ ಆಗಸ್ಟ್ನಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆಗ ಸಂಸತ್ತಿನ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಕರ್ನಾಟಕಕ್ಕೆ ಆಗಾಗ ಭೇಟಿ ನೀಡಿ ಮಹಿಳೆ, ಮಕ್ಕಳು , ರೈತರು ಹಾಗು ಬಡವರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಮಾ ಭರವಸೆ ನೀಡಿದರು.
ಹೇಮಮಾಲಿನಿ ಹಿಂದಿ ಚಿತ್ರರಂಗದಲ್ಲಿ ಇದುವರೆಗೂ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಬಾಗ್ಬಾನ್, ಶೋಲೆ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಚಿತ್ರಗಳು.