* ಬಾಂಬೆ ಸರ್ಕಾರದ ಮುಖ್ಯ ಇಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಾಗಿದ್ದ ಮೊದಲ ರೈಲು 1853ರಲ್ಲಿ ಮುಂಬೈ–ಠಾಣೆ ನಡುವೆ 21 ಮೈಲು ಸಂಚಾರ ನಡೆಸಿತು.
* ಮುಂಬೈನ ಬೋರಿ ಬಂದರ್ನಿಂದ 14 ಬೋಗಿಗಳಲ್ಲಿ 400 ಅತಿಥಿಗಳನ್ನು ಹೊತ್ತ ರೈಲು ಏಪ್ರಿಲ್ 16ರಂದು ಮಧ್ಯಾಹ್ನ 3.30ಕ್ಕೆ ಸಂಚಾರ ಆರಂಭಿಸಿತು. ಅದರ ಸ್ಮರಣಾರ್ಥ 21 ಕುಶಾಲ ತೋಪು ಹಾರಿಸಲಾಗಿತ್ತು. ಸಾರ್ವಜನಿಕರಿಗೆ ಪ್ರಯಾಣಕ್ಕೆ ಈ ರೈಲಿನಲ್ಲಿ ಅವಕಾಶ ಇರದ ಕಾರಣ ಭಾರತದ ಮೊತ್ತ ಮೊದಲ ಪ್ರಯಾಣಿಕರ ರೈಲು ಎಂಬ ಪಟ್ಟದಿಂದ ಇದು ವಂಚಿತವಾಯಿತು.
* 1854ರ ಆಗಸ್ಟ್ 15ರಂದು ಕೋಲ್ಕತ್ತದ ಹೌರಾ ನಿಲ್ದಾಣದಿಂದ ಹೂಗ್ಲಿಗೆ 24 ಮೈಲು ಸಂಚರಿಸಿದ ಈಸ್ಟ್ ಇಂಡಿಯಾ ಕಂಪೆನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು ಎಂದು ಇತಿಹಾಸದಲ್ಲಿ ದಾಖಲಾಗಿದೆ.
* ಅದಾದ ಎರಡು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮದ್ರಾಸ್‌ನಲ್ಲಿ ರೈಲು ಸಂಚಾರ ಆರಂಭವಾಯಿತು. 1856ರಲ್ಲಿ ಮದ್ರಾಸ್ ರೈಲು ಕಂಪೆನಿ ಪ್ರಯಾಣಿಕರ ರೈಲು ವೇಸರಪಾಂಡಿ– ಅರ್ಕಾಟ್ ನಡುವೆ 63 ಮೈಲು ಸಂಚರಿಸಿತು.
* ಇದಾದ ಮೂರು ವರ್ಷಗಳ ನಂತರ ಅಂದರೆ 1859ರಲ್ಲಿ ಉತ್ತರ ಭಾರತದಲ್ಲಿ ಮೊದಲ ರೈಲು ಸಂಚರಿಸಿತು. ಮಾರ್ಚ್ 3ರಂದು ಅಲಹಾಬಾದ್–ಕಾನ್ಪುರ ನಡುವೆ ಈ ರೈಲು 119 ಮೈಲು ಸಂಚರಿಸಿತು.
* 1875ರ ಅಕ್ಟೋಬರ್ 19ರಂದು ಹಥ್ರಾಸ್ ರಸ್ತೆಯಿಂದ ಮಥುರಾ ದಂಡು ರೈಲು ನಿಲ್ದಾಣಕ್ಕೆ ಸಂಚರಿಸಿದ ರೈಲು ಪಶ್ಚಿಮ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆ ಪಡೆದಿದೆ.

ಯುನೆಸ್ಕೊ ಪಟ್ಟಿಯಲ್ಲಿ
* ಭಾರತೀಯ ರೈಲ್ವೆ ಇಲಾಖೆಯ ಎರಡು ಸ್ಥಳಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
* ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ‘ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ’ ಈ ಹೆಗ್ಗಳಿಕೆ ಪಡೆದಿವೆ.
* ದೇಶದ ವಿಭಿನ್ನ ಸ್ಥಳಗಳಲ್ಲಿರುವ ಮೂರು ಪರ್ವತ ಮಾರ್ಗಗಳು ಯುನೆಸ್ಕೊ ಮಾನ್ಯತೆ ಪಡೆದಿವೆ.
* ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಹಿಮಾಲಯ ನ್ಯಾರೊಗೇಜ್ ರೈಲ್ವೆ (ಅಗೋನಿ ಪಾಯಿಂಟ್)
* ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯ ಮೀಟರ್ ಗೇಜ್ ರೈಲ್ವೆ
* ಹಿಮಾಚಲ ಪ್ರದೇಶದ ಕಾಲ್ಕಾ ಶಿಮ್ಲಾ ನ್ಯಾರೊ ಗೇಜ್ ರೈಲ್ವೆ.

ಭಾರತೀಯ ರೈಲ್ವೆ ವೈಶಿಷ್ಟ್ಯ
* ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ವ್ಯವಸ್ಥೆ
* ಹಳಿಗಳ ಉದ್ದ: 1.15 ಲಕ್ಷ ಕಿ.ಮೀ, 65,436 ಮಾರ್ಗಗಳು
* 7,172 ನಿಲ್ದಾಣಗಳು,13 ಲಕ್ಷ ನೌಕರರು
* ವರ್ಷದಲ್ಲಿ 84.25 ಕೋಟಿ ಪ್ರಯಾಣಿಕರ ಸಂಚಾರ
* ಪ್ರತಿನಿತ್ಯ 2.3 ಕೋಟಿಗೂ ಹೆಚ್ಚು ಪ್ರಯಾಣಿಕರ ಸಂಚಾರ
* ವರ್ಷದಲ್ಲಿ 10,502 ಲಕ್ಷ ಟನ್ ಸರಕು ಸಾಗಣೆ
* 2,39,281 ಸರಕು ಸಾಗಣೆ ವ್ಯಾಗನ್‌ಗಳು
* 62,924 ಪ್ರಯಾಣಿಕರ ಬೋಗಿಗಳು
* ಪ್ರತಿನಿತ್ಯ 12,617 ಪ್ರಯಾಣಿಕರ ರೈಲುಗಳ ಸಂಚಾರ
* 7,421 ಸರಕು ಸಾಗಣೆ ರೈಲುಗಳ ಸಂಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.