ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ: ದೂರು ಅರ್ಜಿ ಮಾದರಿ ಶೀಘ್ರ

ಏಪ್ರಿಲ್ 16ರವರೆಗೆ ಸ್ವೀಕೃತವಾದ ಎಲ್ಲಾ ಅರ್ಜಿ ಪರಿಶೀಲನೆ
Last Updated 16 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಲೋಕಪಾಲ ಸಂಸ್ಥೆಗೆ ದೂರು ನೀಡಲು ಅರ್ಜಿ ಮಾದರಿಯನ್ನುಕೇಂದ್ರ ಸರ್ಕಾರ ಶೀಘ್ರ ಪ್ರಕಟಿಸಲಿದೆ.

ನಿಯಮದ ಅನ್ವಯ ಕೇಂದ್ರ ಸರ್ಕಾರ ಅಧಿಸೂಚನೆ ಮುಖಾಂತರಪ್ರಕಟಿಸಲಿರುವ ಅರ್ಜಿ ಮಾದರಿಯಲ್ಲೇ ಲೋಕಪಾಲಕ್ಕೆ ದೂರು ಸಲ್ಲಿಸಬೇಕು. ಈ ಅರ್ಜಿ ಶೀಘ್ರ ಲಭ್ಯವಾಗಲಿದೆ ಎಂದು ಸಿಬ್ಬಂದಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಷ್ಟ್ರ ರಾಜಧಾನಿ ದೆಹಲಿಯ ಚಾಣಕ್ಯಪುರಿಯ ದಿ ಅಶೋಕ್ ಹೋಟೆಲ್‌ನಲ್ಲಿ ಲೋಕಪಾಲದ ಕೇಂದ್ರ ಕಚೇರಿ ಸ್ಥಾಪಿಸಲಾಗಿದೆ.ಗುರುವಾರ ಲೋಕಪಾಲ ಸಂಸ್ಥೆಯ 8 ಸದಸ್ಯರ ಸಮ್ಮುಖದಲ್ಲಿ ಲೋಕಪಾಲ ಮುಖ್ಯಸ್ಥ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಲೋಕಪಾಲ ವೆಬ್‌ಸೈಟ್‌ಗೆ(www.lokpal.gov.in)ಚಾಲನೆ ನೀಡಿದರು. ದೂರು ದಾಖಲಿಸಲು ಅಧಿಕೃತವಾದ ಅರ್ಜಿ ಇನ್ನೂ ಅಧಿಸೂಚನೆ ಮುಖಾಂತರ ಪ್ರಕಟವಾಗದ ಹಿನ್ನೆಲೆಯಲ್ಲಿ 2019 ಏಪ್ರಿಲ್ 16ರವರೆಗೆ ಸ್ವೀಕೃತವಾದ ಎಲ್ಲ ದೂರು ಪರಿಶೀಲಿಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ಸಂಸ್ಥೆಯ ವ್ಯಾಪ್ತಿಗೊಳಪಡದ ದೂರುಗಳನ್ನು ತಿರಸ್ಕರಿಸಲಾಗುವುದು. ಈ ಮಾಹಿತಿಯನ್ನು ದೂರುದಾರರ ಗಮನಕ್ಕೂ ತರಲಾಗು
ವುದು ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.2013ರಲ್ಲಿ ಲೋಕಪಾಲ ಕಾಯ್ದೆಗೆ ಒಪ್ಪಿಗೆ ದೊರೆತಿತ್ತು. ಕಾಯ್ದೆ ಅನ್ವಯ ಜನಪ್ರತಿನಿಧಿಗಳು ಹಾಗೂಸರ್ಕಾರಿ ಉದ್ಯೋಗಿಗಳ ವಿರುದ್ಧ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಕೇಂದ್ರದಲ್ಲಿಲೋಕಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕಾತಿಗೊಳಿಸಲಾಗುತ್ತದೆ. ಮಾರ್ಚ್ 23ರಂದು ಲೋಕಪಾಲರಾಗಿ ನ್ಯಾಯಮೂರ್ತಿ ಪಿ.ಸಿ.ಘೋಷ್ ಪ್ರಮಾಣ ವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT