ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಮೋದಿ

ಶಿಕ್ಷಕರ ದಿನಾಚರಣೆ: ರಾಷ್ಟ್ರದ ವಿದ್ಯಾರ್ಥಿಗಳೊಂದಿಗೆ ವಿಡಿಯೊ ಸಂವಾದ
Last Updated 4 ಸೆಪ್ಟೆಂಬರ್ 2015, 7:18 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್ ಎಸ್): ಸೆ. 5ರ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರದ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳುವ ಮೂಲಕ ಶಿಕ್ಷಕ ವೃಂದವನ್ನು ಹುರಿದುಂಬಿಸಿದರು.

ದೆಹಲಿಯ ಮಾಣಿಕ್ ಷಾ ಸಭಾಂಗಣದಿಂದ ರಾಷ್ಟ್ರದ ವಿದ್ಯಾರ್ಥಿಗಳೊಂದಿಗೆ 90 ನಿಮಿಷ ವಿಡಿಯೊ ಸಂವಾದ ನಡೆಸಿದರು. ಸಂವಾದದಲ್ಲಿ 8 ರಾಜ್ಯಗಳ 800 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

ಡಾ.ಸರ್ವಪಲ್ಲಿ ರಾಧಕೃಷ್ಣ ಅವರ ಗೌರವಾರ್ಥ ಅವರ ಜನ್ಮ ದಿನವನ್ನು ‘ಶಿಕ್ಷಕರ ದಿನ’ವನ್ನಾಗಿ ಆಚರಿಸುತ್ತಿದ್ದೇವೆ ಎಂದು ಮೋದಿ ಸ್ಮರಿಸಿದರು. ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಸಂವಾದ:
* ರಾಷ್ಟ್ರದಲ್ಲಿ ಉತ್ತಮ ಶಿಕ್ಷಕರ ಕೊರತೆ ನೀಗಿಸಲು ಏನು ಮಾಡಬೇಕು?
-  ಆತ್ಮಿಕ್,
ಬೆಂಗಳೂರಿನ ವಿದ್ಯಾರ್ಥಿ

* ಮುಂದೆ ನೀನು ಏನಾಗಬೇಕೆಂದಿದ್ದೀಯ? ಎಂದು ವಿದ್ಯಾರ್ಥಿಗೆ ಮರು ಪ್ರಶ್ನೆ ಕೇಳಿದ ಪ್ರಧಾನಿ, ರಾಷ್ಟ್ರದಲ್ಲಿ ಉತ್ತಮ ಶಿಕ್ಷಕರ ಕೊರತೆ ಇಲ್ಲ. ಶಿಕ್ಷಕರ ದಿನಾಚರಣೆ ಹಾಗೂ ಇಂದಿನ ಸಂವಾದ ಕಾರ್ಯಕ್ರಮ ಉತ್ತಮ ಶಿಕ್ಷಕ ವೃತ್ತಿಗೆ ಪ್ರೇರಣೆಯಾಗಿದೆ.
- ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT