ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸ್ಟಾರ್ ಟಿವಿ’ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದು, ಈ ಪ್ರಕರಣ ಕ್ಷಣಕ್ಕೊಂದು ಹೊಸ ತಿರುವು ಪಡೆಯುತ್ತಿದೆ.

ಶೀನಾ ಬೋರಾ ತನ್ನ ಸಹೋದರಿ ಎಂದು ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದರು. ಆದರೆ, ಶೀನಾ ಆಕೆಯ ಮೊದಲ ಪತಿ ಸಿದ್ದಾರ್ಥ ದಾಸ್ ಎನ್ನುವವರ ಮಗಳು ಎಂಬ ಸತ್ಯ ಹೊರಬಿದ್ದಿದೆ.

2012ರಿಂದ ಶೀನಾ ನಾಪತ್ತೆಯಾಗಿದ್ದಳು. ಇಂದ್ರಾಣಿ ಆಕೆ ಅಮೆರಿಕದಲ್ಲಿ ಓದುತ್ತಿದ್ದಾಳೆ ಎಂದೇ ಎಲ್ಲರಿಗೂ ಹೇಳಿದ್ದರು. ಖಚಿತ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ಇಂದ್ರಾಣಿ ಅವರ ಕಾರು ಚಾಲಕನನ್ನು ತನಿಖೆಗೆ ಒಳಪಡಿಸಿದಾಗ ಶೀನಾ ಕೊಲೆಯಾಗಿರುವ ವಿಚಾರ ಹೊರಬಿದ್ದಿದೆ.

ಶೀನಾಳನ್ನು ರಾಯಗಡ ಬಳಿ ಇಂದ್ರಾಣಿಯೇ ಕೊಲೆ ಮಾಡಿದ್ದು, ಆ ಸಂದರ್ಭದಲ್ಲಿ ತಾನು ಅಲ್ಲಿಯೇ ಇದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ನಡುವೆ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆಯ ಆಧಾರದಲ್ಲಿ ಇಂದ್ರಾಣಿ ಅವರ 2ನೇ ಪತಿಯಾಗಿದ್ದ ಸಂಜೀವ್ ಖನ್ನಾ ಅವರನ್ನು ಕೋಲ್ಕತ್ತದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.