ಅಹಮದಾಬಾದ್ : ಸಾಲದ ಹೊರೆಯಿಂದ ನಲುಗಿದ್ದ ಗುಜರಾತಿನ ಉದ್ಯಮಿಯೊಬ್ಬರು ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಬುಧವಾರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಉನ್ನತ ವ್ಯಾಸಂಗಕ್ಕಾಗಿ ಹಿರಿಯ ಮಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಜಗಳ ನಡೆದಿತ್ತು. ಇದರಿಂದಾ
ಗಿಯೇ ಉದ್ಯಮಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಧರ್ಮೇಶ್ ಶಾ (50) ಕೊಲೆ ಮಾಡಿದ ಆರೋಪಿ. ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿದ್ದ ಇವರು ಸುಮಾರು ₹15 ಕೋಟಿ ಸಾಲ ಮಾಡಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ನ್ಯಾಯಾಧೀಶರ ಬಡಾವಣೆಯಲ್ಲಿ ನೆಲೆಸಿದ್ದರು.

ಪಿಸ್ತೂಲ್‌ನಿಂದ ಪತ್ನಿ ಅಮಿಬೆನ್ ಮೇಲೆ ಶಾ ಗುಂಡು ಹಾರಿಸಿದ್ದಾರೆ. ನಂತರ ಪುತ್ರಿಯರಾದ ಹೆಲಿ (24) ಮತ್ತು ಖುಷಿ (18) ಮೇಲೆ ಬಂದೂಕಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಸಿಪಿ ಎಸ್.ಎನ್.ಝಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.