ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿ ರಾಷ್ಟ್ರ ಭಾಷೆ: ಬಾಪು ಆಶಯ’

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದೋರ್‌, ಚೆನ್ನೈ (ಪಿಟಿಐ): ‘ಹಿಂದಿ­ಯನ್ನು ರಾಷ್ಟ್ರ­ಭಾಷೆಯನ್ನಾಗಿ ಮಾಡ­ಬೇಕು ಎಂದು ಶತಮಾನಗಳ ಹಿಂದೆ ಮಹಾತ್ಮ­ಗಾಂಧಿ ಕರೆ ನೀಡಿದ್ದರು. ಅವರ  ಆಶಯ ಬಹುಭಾಷೆಯ ಈ ದೇಶದ ಮೂಲೆ ಮೂಲೆ­ಯಲ್ಲೂ ರಿಂಗಣಿಸಿದೆ’ ಎಂದು ಮಧ್ಯಭಾರತ ಹಿಂದಿ ಸಾಹಿತ್ಯ ಸಮಿತಿ ಪ್ರಚಾರ ಉಸ್ತುವಾರಿ ಅರವಿಂಜ್‌ ಓಝಾ ಹೇಳಿದ್ದಾರೆ.

‘ಹಿಂದಿ ದಿವಸ’ ಸಂದರ್ಭದಲ್ಲಿ ಸುದ್ದಿ­ಸಂಸ್ಥೆಯೊಂದಿಗೆ ಮಾತನಾಡಿದ ಅವರು, ೧೯೧೮ರ ಮಾರ್ಚ್‌ ೨೯­ರಂದು ಗಾಂಧೀಜಿ ಇಂದೋರ್‌ನಲ್ಲಿ ನಡೆದ ಎಂಟನೇ ಹಿಂದಿ ಸಾಹಿತ್ಯ ಸಮ್ಮೇ­ಳನದ ಅಧ್ಯಕ್ಷತೆ ವಹಿಸಿದ್ದರು.  ಹಿಂದಿಗೆ ರಾಷ್ಟ್ರಭಾಷೆ ಸ್ಥಾನಮಾನ ನೀಡ­ಬೇಕು ಎಂದು ಮೊಟ್ಟ ಮೊದಲ ಬಾರಿ ಕರೆ ನೀಡಿ­ದ್ದರು. ಸ್ವಾತಂತ್ರ್ಯ ಸಮರದ ಆ ಸಂದರ್ಭದಲ್ಲಿ ಗಾಂಧಿ ಕೊಟ್ಟಿದ್ದ ಕರೆ ಜನರ ಮನ ಮುಟ್ಟಿತ್ತು. ಇದರಿಂದಾಗಿ ಸ್ವಾತಂತ್ರ್ಯದ ಹಂಬಲ ಇನ್ನಷ್ಟು ಗಟ್ಟಿ­ಯಾ­ಗಿತ್ತು’ ಎಂದೂ ಓಝಾ ಹೇಳಿದರು.

ವಿಶ್ವಸಂಸ್ಥೆ: ಹಿಂದಿಯಲ್ಲೇ ಮೋದಿ ಭಾಷಣ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಲಿದ್ದಾರೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಭಾನುವಾರ ತಿಳಿಸಿದ್ದಾರೆ.
‘ಮಾಜಿ ಪ್ರಧಾನಿ­ ಅಟಲ್‌ ಬಿಹಾರಿ ವಾಜಪೇಯಿ­ ಅವರೂ ವಿಶ್ವಸಂಸ್ಥೆಯಲ್ಲಿ ಹಿಂದಿ­ಯಲ್ಲಿ ಮಾತನಾಡಿದ್ದರು. ಹಿಂದೆ ನಾನು ಒಂದು ಬಾರಿ ವಿಶ್ವಸಂಸ್ಥೆ­ಯಲ್ಲಿ ಹಿಂದಿ­ ಭಾಷೆಯಲ್ಲೇ ಮಾತನಾಡಿದ್ದೆ’ ಎಂದು ಹೇಳಿದರು.
ಸೆಪ್ಟೆಂಬರ್‌ 27ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ನಡೆಯಲಿದೆ.

ಓಝಾ ಹೇಳಿದ್ದು: ‘ಈ ದೇಶ­ದಲ್ಲಿ ಆಗ ಹಿಂದಿ ಅಷ್ಟೇನು ಜನಪ್ರಿ­ಯ­ವಾಗಿರದಿದ್ದ ರಾಜ್ಯಗಳಿಗೆ ಗಾಂಧೀಜಿ ಹಿಂದಿ ಪ್ರಚಾರಕರನ್ನು ಕಳಿಸಿ­ದ್ದರು. ಈ ಪೈಕಿ ಅವರ ಕಿರಿಯ ಮಗ ದೇವದಾಸ್‌ ಗಾಂಧಿ ಕೂಡ ಒಬ್ಬರಾ­ಗಿದ್ದರು. ಈ ಐತಿಹಾಸಿಕ ಅಭಿಯಾನದ ಭಾಗವಾಗಿ ಆಗಿನ ಮದ್ರಾಸ್‌ ರಾಜ್ಯಕ್ಕೆ ಮೊದಲು ಹಿಂದಿ ಪ್ರಚಾರಕರನ್ನು ಕಳಿಸಲಾಗಿತ್ತು.

‘ಗಂಗಾ–ಜಮುನಿ ಸಹಬಾಳ್ವೆ ಸಂಸ್ಕೃತಿ­­ಯನ್ನು ಹಿಂದಿ ಭಾಷೆ ಬಿಂಬಿ­ಸು­ತ್ತದೆ ಎಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಗಾಂಧಿ ಹೇಳಿ­ದ್ದರು.  ಹಿಂದಿಗೆ ರಾಷ್ಟ್ರಭಾಷೆ ಮಾನ್ಯತೆ ಸಿಗದ ಹೊರತು ಸ್ವರಾಜ್ಯಕ್ಕೆ ಅರ್ಥವೇ ಇಲ್ಲ ಎಂದೂ ಹೇಳಿದ್ದರು’ ಎಂದು ಓಝಾ ನೆನಪಿಸಿಕೊಂಡರು.

ತಮಿಳು ಪಕ್ಷಗಳ ವಿರೋಧ
ಇಂಗ್ಲಿಷ್‌ ಜತೆಗೆ ಹಿಂದಿ­ಯನ್ನೂ ಪ್ರಥಮ ಭಾಷೆಯಾಗಿ ಕಲಿಸಬೇಕು ಎಂದು ವಿಶ್ವ­ವಿದ್ಯಾಲಯ­ಗಳಿಗೆ ಗೃಹ ಸಚಿ­ವಾಲಯ ಕಳುಹಿಸಿದ ಸುತ್ತೋಲೆಗೆ ಪಿಎಂಕೆ, ಎಂಡಿಎಂಕೆ ವಿರೋಧ ವ್ಯಕ್ತಪಡಿಸಿವೆ.

‘ಇದು ಹಿಂದಿಯನ್ನು ಹೇರುವ ಇನ್ನೊಂದು ಪ್ರಯತ್ನ. ಕೂಡಲೇ ಈ ಸುತ್ತೋಲೆ­ಯನ್ನು ವಾಪಸ್‌ ಪಡೆ­ಯಬೇಕು’ ಎಂದು ಪಿಎಂಕೆ ಸಂಸ್ಥಾಪಕ ಎಸ್‌.ರಾಮದಾಸ್‌ ಹಾಗೂ ಎಂಡಿಎಂಕೆ ಮುಖ್ಯಸ್ಥ ವೈಕೊ ಪ್ರತ್ಯೇಕ  ಹೇಳಿಕೆಗಳಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT