ಬೆಂಗಳೂರಿನಿಂದ ಆರಂಭವಾಗುವ ಯಾತ್ರೆಯು ಒಟ್ಟು 10 ದಿನಗಳ ಪ್ರವಾಸದಲ್ಲಿ ಉತ್ತರಾಖಂಡದ ಪ್ರವಾಸಿ ತಾಣಗಳಾದ ಭೀಮತಾಲ್, ನೈನಿತಾಲ್, ಕೈಂಚಿ ಧಾಮ್, ಬಾಬಾ ನೀಮ್ ಕರೋಲಿ ದೇವಸ್ಥಾನ, ಕಸರ್ ದೇವಿ ದೇವಸ್ಥಾನ, ಕತರ್ಮಲ್ ಸೂರ್ಯ ದೇವಾಲಯ, ಜಾಗೇಶ್ವರ ಧಾಮ್, ಗೋಲು ದೇವತಾ, ಚಿಟೈ, ಅಲ್ಮೋರ, ನಂದಾ ದೇವಿ ದೇವಸ್ಥಾನ, ಬೈಜಿನಾಥ್, ಬಾಗೇಶ್ವರ, ಕೌಸನಿ, ರಾಣಿಖೇತ್‌ಗಳಿಗೆ ಭೇಟಿ ನೀಡಬಹುದು ಎಂದು ಐಆರ್‌ಸಿಟಿಸಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಜಿತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.