ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ರೈಲುಗಳ ವೇಗ ಹೆಚ್ಚಳ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು 17 ರೈಲುಗಳ ವೇಗ ಹೆಚ್ಚಿಸಿರುವ ಕಾರಣ ನ.1ರಿಂದ ಈ ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ಇದರಿಂದ 5ರಿಂದ 45 ನಿಮಿಷಗಳವರೆಗೆ ಸಮಯ ಉಳಿತಾಯವಾಗಲಿದೆ.

ಪ್ರತಿದಿನ ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊಡುವ ರೈಲು (16201), ಸಂಜೆ 7.55ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲಿಗಿಂತ 20 ನಿಮಿಷ ಬೇಗ ತಲುಪಲಿದೆ. ಮಧ್ಯಾಹ್ನ 3.10ಕ್ಕೆ ಚಾಮರಾಜನಗರದಿಂದ ಹೊರಡುವ ರೈಲು (56213) ಬೆಳಗಿನ ಜಾವ 5.25ಕ್ಕೆ ತಿರುಪತಿಯನ್ನು ಮುಟ್ಟಲಿದೆ. ಹತ್ತು ನಿಮಿಷ ಸಮಯ ಉಳಿತಾಯವಾಗಲಿದೆ.

ರಾತ್ರಿ 7.40ಕ್ಕೆ ಮೈಸೂರಿನಿಂದ ಹೊರಡುವ ರೈಲು (16227) ಬೆಂಗಳೂರು ಮಾರ್ಗವಾಗಿ ಬೆಳಿಗ್ಗೆ 7.15ಕ್ಕೆ ತಾಳಗುಪ್ಪವನ್ನು 30 ನಿಮಿಷ ಮುಂಚಿತವಾಗಿ ತಲುಪಲಿದೆ. ಮೈಸೂರಿನಿಂದ ರಾತ್ರಿ 10.30ಕ್ಕೆ ಹೊರಡುವ ರೈಲು (17301) ಬೆಳಿಗ್ಗೆ 8ಕ್ಕೆ ಧಾರವಾಡ ತಲುಪಲಿದೆ. ಅದೇ ರೀತಿ, ಯಶವಂತಪುರದಿಂದ ಸಂಜೆ 4.15ಕ್ಕೆ ಹೊರಡುವ ರೈಲು (16577) ರಾತ್ರಿ 11.30ಕ್ಕೆ ಹರಿಹರ ತಲುಪಲಿದೆ. ಬೆಳಿಗ್ಗೆ 7.10ಕ್ಕೆ ಯಶವಂತಪುರದಿಂದ ಹೊರಡುವ ರೈಲು (16515) ಮಂಗಳೂರು ಮಾರ್ಗವಾಗಿ ಕಾರವಾರವನ್ನು ಸಂಜೆ 4.55ಕ್ಕೆ ತಲುಪಲಿದೆ. ಈ ರೈಲಿನ ಸಂಚಾರ ಸಮಯವನ್ನು 45 ನಿಮಿಷ ಕಡಿತಗೊಳಿಸಲಾಗಿದೆ.

ಬೆಂಗಳೂರಿನಿಂದ ಬೆಳಿಗ್ಗೆ 7.45ಕ್ಕೆ ಹೊರಡುವ ಪ್ಯಾಸೆಂಜರ್‌ ರೈಲು (56515) ರಾತ್ರಿ 8.45ಕ್ಕೆ ಹುಬ್ಬಳ್ಳಿ ತಲುಪಲಿದೆ. ಮೊದಲು ಈ ರೈಲು ರಾತ್ರಿ 8.50ಕ್ಕೆ ಹುಬ್ಬಳ್ಳಿಗೆ ಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT