ತುಮಕೂರು: ಸೂಕ್ಷ್ಮ ಕಲಾಕೃತಿ ರಚನೆ ಮೂಲಕ ಗಮನ ಸೆಳೆದಿರುವ ಭದ್ರಾವತಿ ಎನ್‌ಎಸ್‌ಟಿ ರಸ್ತೆ ತೇಜಸ್ವಿನಿ ಜ್ಯೂಯಲರಿ ವರ್ಕ್ಸ್ ಮಾಲೀಕ ಕೆ.ಯು. ರವಿಚಂದ್ರ ಅವರು 20 ಮಿಲಿ ಗ್ರಾಂ ಚಿನ್ನದಲ್ಲಿ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿಯವರ ಕಲಾಕೃತಿ ರಚಿಸಿದ್ದಾರೆ.

ಬುಧವಾರ ಮಠಕ್ಕೆ ಪತ್ನಿ ರಾಜೇಶ್ವರಿ ಮತ್ತು ಪುತ್ರ ವೇದಾಂತ ಅವರೊಂದಿಗೆ ಭೇಟಿ ನೀಡಿದ್ದ ಅವರು, ಕಲಾಕೃತಿಯನ್ನು ಶ್ರೀಗಳಿಗೆ ತೋರಿಸಿದರು.

’ಮಿಲಿ ಗ್ರಾಂಗಳಲ್ಲಿ ಈ ರೀತಿ ಸೂಕ್ಷ್ಮ ಕಲಾಕೃತಿ ರಚಿಸುವುದು ನನ್ನ ಅಭಿರುಚಿಯಾಗಿದೆ. 7.5 ಮಿಲಿ ಗ್ರಾಂನಲ್ಲಿ ಮಹಾವೀರ, 70 ಮಿಲಿ ಗ್ರಾಂನಲ್ಲಿ ಮೆಕ್ಕಾ ಮದಿನಾ, ಐದುವರೆ ಮಿಲಿಗ್ರಾಂನಲ್ಲಿ ಏಸು, 50 ಮಿಲಿಗ್ರಾಂನಲ್ಲಿ ಹೆಲ್ಮೆಟ್ ಸೇರಿ ಅನೇಕ ಕಲಾಕೃತಿ ರಚಿಸಿದ್ದೇನೆ. ವಿಶ್ವ ಕ್ರಿಕೆಟ್ ಕಪ್ ಅನ್ನು 20 ಮಿಲಿಗ್ರಾಂ ಚಿನ್ನದಲ್ಲಿ ರೂಪಿಸಿದ್ದು, ಇದಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ಲಭಿಸಿದೆ’ ಎಂದು ರವಿಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಡಾ.ಶಿವಕುಮಾರ ಸ್ವಾಮೀಜಿಯವರ 111ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರ ಆಧರಿಸಿ ಈ ಕಲಾಕೃತಿ ರಚಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.