ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಯಿಂದ ಬಹುರೂಪಿ ಆರಂಭ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣದಲ್ಲಿ ಜ.14ರಿಂದ 21ರ ವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.

ನಾಟಕೋತ್ಸವಕ್ಕೆ 14ರಂದು ಸಂಜೆ 5.30ಕ್ಕೆ ರಂಗಾಯಣದ ವನರಂಗದಲ್ಲಿ ನಾಟಕಕಾರ ಗಿರೀಶ ಕಾರ್ನಾಡ ಚಾಲನೆ ನೀಡಲಿದ್ದಾರೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರತಿಬಾಯಿ ಕದಂ ಇಲ್ಲಿ ಗುರುವಾರ ತಿಳಿಸಿದರು.

ಪ್ರಸ್ತುತ ಜಗತ್ತನ್ನು ವಲಸೆಯು ಹಲವು ವಿಧದಲ್ಲಿ ಕಾಡುತ್ತಿದೆ. ಜೀವರಾಶಿಯ ಸಹಜ ಜೀವನದ ನೆಲೆಗೆ ಅನೇಕ ಆತಂಕಗಳು ಎದುರಾಗುತ್ತಿರುವುದರಿಂದ ವಲಸೆ ಅನಿವಾರ್ಯ ಎನಿಸಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಬಹುರೂಪಿ ನಾಟಕೋತ್ಸವವನ್ನು ವಲಸೆ ವಿಷಯ ಕುರಿತೇ ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದ ವಿವಿಧ ರಾಜ್ಯಗಳ 9 ನಾಟಕಗಳು, 9 ಕನ್ನಡ ನಾಟಕಗಳು ಮತ್ತು 6 ಏಕವ್ಯಕ್ತಿ ನಾಟಕಗಳು ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿವೆ. ಜ.14ರಿಂದ ಆರಂಭವಾಗುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 24 ಚಲನಚಿತ್ರಗಳು ಪ್ರದರ್ಶನ ಕಾಣಲಿವೆ. ಜ.20 ಮತ್ತು 21ರಂದು ವಲಸೆ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ಲೇಖಕಿ ನಂದಿತಾ ಹಕ್ಸರ್, ಪತ್ರಕರ್ತ ಪಿ.ಸಾಯಿನಾಥ್ ಭಾಗಿಯಾಗಲಿದ್ದಾರೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT