ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆ.30ರಿಂದ ‘ಅಕ್ಕ’ ಸಮ್ಮೇಳನ

Published 14 ಜೂನ್ 2024, 15:26 IST
Last Updated 14 ಜೂನ್ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ಆರು ವರ್ಷದ ಬಳಿಕ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನವು ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್‌ ನಗರದಲ್ಲಿ ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್‌ 1ರಂದು ನಡೆಯಲಿದೆ.

42 ಅಮೆರಿಕದ ಕನ್ನಡ ಸಂಘಗಳು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ ಎಂದು ‘ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ)’ದ ಅಧ್ಯಕ್ಷ ರವಿ ಬೋರೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು, ಫ್ಯಾಶನ್‌ ಶೋ, ಸಾಹಿತ್ಯ ಗೋಷ್ಠಿ, ಬಿಸಿನೆಸ್‌ ಫೋರಂ, ನಾಡಿನ ವಿಶಿಷ್ಟ ಖಾದ್ಯಗಳ ಭೋಜನ, ವಿಜಯ್‌ ಪ್ರಕಾಶ್‌ ಹಾಗೂ ರಾಜೇಶ್‌ ಕೃಷ್ಣನ್‌ ಮುಂತಾದ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸುವ ಸಂಗೀತ ಸಂಜೆ, ನಾಡಿನ ಪಾರಂಪರಿಕ ನೃತ್ಯ ಶೈಲಿಗಳಾದ ಡೊಳ್ಳು ಕುಣಿತ, ಯಕ್ಷಗಾನ ಪ್ರದರ್ಶನ, ಕನ್ನಡ ನಾಟಕಗಳ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಒಕ್ಕೂಟವು ಆಯೋಜಿಸಿದೆ ಎಂದು ವಿವರಿಸಿದರು.

‘ಅಕ್ಕ’ ಸಮ್ಮೇಳನಕ್ಕೆ ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು, ಆಧ್ಯಾತ್ಮಿಕ ಕ್ಷೇತ್ರದ ಪ್ರಮುಖರು, ಚಿತ್ರ ತಾರೆಯರು, ಸಾಹಿತಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ. ₹20 ಕೋಟಿಯಿಂದ ₹25 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT