ಶಿವಮೊಗ್ಗ: ಅಡಿಕೆ ಧಾರಣೆ 10 ದಿನದಲ್ಲಿ ₹ 10 ಸಾವಿರ ಹೆಚ್ಚಳವಾಗಿದೆ. ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಇಡಿ ವರ್ಗದ ಗರಿಷ್ಠ ಧಾರಣೆ ₹ 60 ಸಾವಿರ ದಾಟಿ ದಾಖಲೆ ಬರೆದಿದೆ.
ರಾಶಿ ಪ್ರಕಾರದ ಅಡಿಕೆ ಧಾರಣೆ 2010ರವರೆಗೆ ಕ್ವಿಂಟಲ್ಗೆ ₹ 10 ಸಾವಿರದಿಂದ ₹ 15 ಸಾವಿರದ ಆಸುಪಾಸು ಇತ್ತು.2014–15ರಲ್ಲಿ ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ನಂತರ ಮತ್ತೆ ಕುಸಿದಿತ್ತು. 2020ರಲ್ಲಿ ಗರಿಷ್ಠ ಧಾರಣೆ ₹ 42 ಸಾವಿರ ಇತ್ತು. ಈಗ ಮತ್ತೆ ಧಾರಣೆ ಏರಿಕೆಯಾಗುತ್ತಿದೆ.