ಅಮ್ರಿತ್ ಪೌಲ್, ನೇಮಕಾತಿ ವಿಭಾಗದ ಡಿವೈಎಸ್ಪಿಯಾಗಿದ್ದ ಶಾಂತಕುಮಾರ್ ಹಾಗೂ ಬಂಧಿತ ಇತರೆ ಆರೋಪಿಗಳಿಗೆ ಸೇರಿದ 11 ಸ್ಥಳಗಳ ಮೇಲೆ ಗುರುವಾರ ಇ.ಡಿ ಅಧಿಕಾರಿಗಳು ದಾಳಿಸಿದ್ದರು. ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ಇ.ಡಿ ಅಧಿಕಾರಿಗಳು, ‘ಡಿಜಿಟಲ್ ಹಾಗೂ ಕಾಗದ ರೂಪದ ದಾಖಲೆ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.