ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹ 13.55 ಕೋಟಿ ವೆಚ್ಚದಲ್ಲಿ ಆಯುಷ್ ಔಷಧ ತಯಾರಿಕಾ ಘಟಕ

Published : 28 ಜುಲೈ 2020, 6:51 IST
ಫಾಲೋ ಮಾಡಿ
Comments

ಬೆಳಗಾವಿ: ‘ಇಲ್ಲಿನ ದಕ್ಷಿಣ ಮತ ಕ್ಷೇತ್ರದ ಲಸಿಕಾ ಘಟಕದಲ್ಲಿ (ವ್ಯಾಕ್ಸಿನ್ ಡಿಪೊ) ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರದ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

‘ಇದು ಉತ್ತರ ಕರ್ನಾಟಕಕ್ಕೆ ಅತಿ ಮಹತ್ವದ ಕೊಡುಗೆಯಾಗಿದೆ. 456 ರೀತಿಯ ವಿವಿಧ ಗಿಡಮೂಲಿಕೆಗಳನ್ನು ವ್ಯಾಕ್ಸಿನ್ ಡಿಪೊ ಪ್ರದೇಶ ಹೊಂದಿದ್ದು, ಇಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರ ಸ್ಥಾಪಿಸುವುದು ಅವಶ್ಯವಾಗಿದೆ. ಹಂತ ಹಂತವಾಗಿ ವಿಸ್ತರಣೆ ಉದ್ದೇಶದ ಯೋಜನೆಯ ಕಾಮಗಾರಿಗೆ ₹ 13.55 ಕೋಟಿ ಅಂದಾಜು ಮೊತ್ತದ ಪ್ರಸ್ತಾವ ಸಲ್ಲಿಸಲಾಗಿತ್ತು. ಮೊದಲ ಹಂತವಾಗಿ ಸರ್ಕಾರವು ₹ 10 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರದಿಂದ ಮಾಡುತ್ತಿರುವ ಮೊದಲ ಘಟಕವಾಗಿದೆ. ಇಲ್ಲಿ ಸಿದ್ಧಗೊಳ್ಳುವ ಎಲ್ಲ ಬಗೆಯ ಔಷಧಿಗಳು ಹಾಗೂ ಪರಿಕರಗಳನ್ನು ರಾಜ್ಯದ ಎಲ್ಲ ಆಯುಷ್ ಆರೋಗ್ಯ ಕೇಂದ್ರಗಳಿಗಳಷ್ಟೇ ಅಲ್ಲದೇ ವಿದೇಶಗಳಿಗೂ ರಪ್ತು ಮಾಡುವ ಉದ್ದೇಶ ಹೊಂದಲಾಗಿದೆ. ಕೇಂದ್ರವನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರಿಸದೆ ಬೆಳಗಾವಿಯ ವ್ಯಾಕ್ಸಿನ್ ಡಿಪೊದಲ್ಲಿಯೇ ಸ್ಥಾಪಿಸುವಂತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಒತ್ತಡ ಹಾಕಿದ್ದೆ. ಇದಕ್ಕೆ ಮನ್ನಣೆ ದೊರೆತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಘಟಕ ಸ್ಥಾಪನೆ ಆಗುತ್ತಿದೆ. ಇದನ್ನು ದೇಶದಲ್ಲಿಯೇ ಮಾದರಿಯನ್ನಾಗಿ ಮಾಡುವ ಉದ್ದೇಶವಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT