ಬೆಂಗಳೂರು: ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಂಬಿಸಿಕೊಂಡಿರುವ ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ಕೇವಲ 40 ಮಂದಿಗೆ ಮಾತ್ರ ₹ 3 ಲಕ್ಷ ಮೇಲ್ಪಟ್ಟ ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಸಿಕ್ಕಿದೆ.

ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯವಿಮೆ ಯೋಜನೆಯಡಿ ನೋಂದಾ
ಯಿಸಿ ಕೊಂಡವರು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ವರ್ಷಕ್ಕೆ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದು, ಉಳಿದ ಕುಟುಂಬಗಳು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸರ್ಕಾರಿ ಹಾಗೂ ರೆಫರಲ್ ಆಧಾರಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿವೆ.

ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಸಮಸ್ಯೆ ಸೇರಿದಂತೆ ವಿವಿಧ ಮಾರಣಾಂತಿಕ ಕಾಯಿಲೆಗಳಿಗೆ ಬಡ, ಮಧ್ಯಮ ವರ್ಗದವರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕೆನ್ನುವುದು ಯೋಜನೆಯ ಮುಖ್ಯ ಉದ್ದೇಶ. ಮಾರಣಾಂತಿಕ ಕಾಯಿಲೆಗಳ ವ್ಯಾಪ್ತಿಯಲ್ಲಿ ಬರುವ ತೃತೀಯ ಹಂತದ (ರೋಗದ ತೀವ್ರತೆ ನಿರ್ಧರಿಸುವುದು) 900 ಚಿಕಿತ್ಸಾ ವಿಧಾನಗಳು ಸೇರಿದಂತೆ ಒಟ್ಟು 1,650 ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ದಾಖಲಾತಿಯ ಪ್ರಕಾರ ಯೋಜನೆಯಡಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 2.47 ಲಕ್ಷ (ಆಗಸ್ಟ್ ಅಂತ್ಯಕ್ಕೆ) ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು, ಬೆರಳಣಿಕೆಯಷ್ಟು ಮಂದಿಗೆ ಮಾತ್ರ ದುಬಾರಿ ಮೊತ್ತದ ಚಿಕಿತ್ಸೆಗಳು ದೊರೆತಿವೆ.

ದಾಖಲಾತಿ ಸಮಸ್ಯೆ: ತೃತೀಯ ಹಂತದ ಕಾಯಿಲೆಗಳಿಗೆಚಿಕಿತ್ಸೆ ಪಡೆದುಕೊಳ್ಳಲು ವಿವಿಧ ಆಸ್ಪತ್ರೆಗಳಿಗೆ 80 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ‘ಯೋಜನೆಯ ನಿಯಮದ ಪ್ರಕಾರ ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಸಾಧ್ಯವಾಗದಿದ್ದಲ್ಲಿ ರೆಫರಲ್ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ’ ಎಂದು ವೈದ್ಯರು ಹೇಳುತ್ತಾರೆ. ‘ಕ್ಯಾನ್ಸರ್‌ನಂತಹ ತೃತೀಯ ಹಂತದ ಕಾಯಿಲೆಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ದುಬಾರಿ ಚಿಕಿತ್ಸೆ ಒದಗಿಸಲು ಕೆಲ ಅಡೆತಡೆಗಳಿವೆ. ರಾಜ್ಯದ ರೋಗಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಮಾನದಂಡವಾಗಿ ಪರಿಗಣಿಸಲಾಗು
ತ್ತಿದೆ. ಹೊರ ರಾಜ್ಯಗಳಿಂದ ಚಿಕಿತ್ಸೆಗೆ ಬರುವ ರೋಗಿಗಳು ಅಗತ್ಯ ದಾಖಲಾತಿ ಹೊಂದಿರದೆ ಯೋಜನೆಯ ಫಲಾನುಭವಿ ಎಂದು ಪರಿಗಣಿಸಲು ಸಾಧ್ಯವಾಗುತ್ತಿಲ್ಲ’ ಎಂದುಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಪಂಕಜ್ ಕುಮಾರ್ ಪಾಂಡೆ ಅವರನ್ನುದೂರವಾಣಿ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

ಪ್ಯಾಕೇಜ್ ರೂಪದಲ್ಲಿ ಚಿಕಿತ್ಸಾ ಮೊತ್ತ ನಿಗದಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಆರೋಗ್ಯ ವಿಮೆ ಸೌಲಭ್ಯ ಸಿಗುತ್ತಿಲ್ಲ. ಒಮ್ಮೆ ಫಲಾನುಭವಿಯಾದರೆ ಮತ್ತೆ ಚಿಕಿತ್ಸೆಗೆ 6 ತಿಂಗಳು ಕಾಯಬೇಕು
-ಹಿರಿಯ ಅಧಿಕಾರಿಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್

ಅಂಕಿ–ಅಂಶಗಳು

2.47 ಲಕ್ಷ - ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಪಡೆದವರು

₹695 ಕೋಟಿ - ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಮಾಡಲಾದ ವೆಚ್ಚ

97.82 ಲಕ್ಷ - ಯೋಜನೆಗಳಡಿ ವಿತರಿಸಲಾದ ಆರೋಗ್ಯ ಕಾರ್ಡ್‌ಗಳ ಸಂಖ್ಯೆ

1.05 ಕೋಟಿ -ಯೋಜನೆಗಳ ಫಲಾನುಭವಿ ಕುಟುಂಬಗಳ ಸಂಖ್ಯೆ

776 - ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು

ಯೋಜನೆಯಡಿ ಚಿಕಿತ್ಸೆ ಪಡೆದವರು

ಪ್ರಕರಣದ ವಿಧ;ಚಿಕಿತ್ಸೆ ಪಡೆದುಕೊಂಡವರು;ಮಾಡಲಾದ ವೆಚ್ಚ (₹ ಕೋಟಿಗಳಲ್ಲಿ)

ಸಾಮಾನ್ಯ ದ್ವಿತೀಯ ಹಂತ;1,10,918;96.18

ಕ್ಲಿಷ್ಟಕರ ದ್ವಿತೀಯ ಹಂತ;22,186;43.57

ತೃತೀಯ ಹಂತ;83,850;457.18

ತುರ್ತು ಚಿಕಿತ್ಸೆ;30,531;97.71

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.