ಬೆಂಗಳೂರು: ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008 ಫೆ. 4ರ ನಂತರ ನೇಮಕಗೊಂಡು, ಅನುದಾನಕ್ಕೆ ಒಳಪಟ್ಟಿರುವ ಉಪನ್ಯಾಸಕರ ಪೈಕಿ ಬಿ.ಇಡಿ ಪದವಿ ಹೊಂದಿರದ 364 ಉಪನ್ಯಾಸಕರನ್ನು ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಬಿ.ಇಡಿ ವ್ಯಾಸಂಗಕ್ಕೆ ವೇತನಸಹಿತವಾಗಿ ನಿಯೋಜಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದರೆ, ಹೀಗೆ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಕವಾಗುವ ಅತಿಥಿ ಉಪನ್ಯಾಸಕರ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಿಂದಲೇ ಭರಿಸಲಾಗುವುದು ಎಂದು ಆದೇಶದಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿವರಿಸಿದೆ.

ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆಗೊಳ್ಳುವ ಉಪನ್ಯಾಸಕರ ಕಾರ್ಯಭಾರದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ಇಲಾಖೆಯ ನಿರ್ದೇಶಕರು ನೇಮಿಸಿಕೊಳ್ಳಬೇಕು. ಹೀಗೆ ನೇಮಕಗೊಂಡವರ ವೇತನವನ್ನು ನಿಯೋಜನೆಗೊಂಡ ಉಪನ್ಯಾಸಕರ ವೇತನದಲ್ಲಿಯೇ ಭರಿಸುವ ಸಂಬಂಧ ನಿಯೋಜನೆ ಮೇಲೆ ತೆರಳುವ ಉಪನ್ಯಾಸಕರಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು. ಬಿ.ಇಡಿ ವ್ಯಾಸಂಗವನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಪೂರೈಸಬೇಕು. ಈ ವ್ಯಾಸಂಗಕ್ಕೆ ತಗಲುವ ಶುಲ್ಕ ಅಥವಾ ವೆಚ್ಚವನ್ನು ಇಲಾಖೆಯಿಂದ ಪಾವತಿಸುವುದಿಲ್ಲ. ಎರಡು ವರ್ಷದೊಳಗೆ ಬಿ.ಇಡಿ ಕೋರ್ಸ್ ಮುಗಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆಗೊಂಡ ಉಪನ್ಯಾಸಕರಿಗೆ, ಕಾರ್ಯನಿರತ ಅವಧಿಯಲ್ಲಿ ಲಭ್ಯವಿದ್ದ ಯಾವುದೇ ರಜಾ ಸೌಲಭ್ಯ ಸಿಗುವುದಿಲ್ಲ. ಬಿ.ಇಡಿ ಪದವಿ ಮುಗಿಸಿದ ಉಪನ್ಯಾಸಕರು ತಮ್ಮ ಪರೀಕ್ಷಾ ಅವಧಿಯ ಬಳಿಕ ವೇತನ ಬಡ್ತಿ ಪಡೆಯಲು ಅರ್ಹರಾಗಲಿದ್ದಾರೆ. ಪ್ರಸ್ತಾಪಿತ ಬಿ.ಇಡಿ ವ್ಯಾಸಂಗಕ್ಕೆ ನಿಯೋಜಿಸುವ ಸಮಯ ಮತ್ತಿತರ ಅಂಶಗಳನ್ನು ನಿರ್ದೇಶಕರ ಹಂತದಲ್ಲಿಯೇ ನಿರ್ಧರಿಸಬೇಕು ಎಂದೂ ಸ್ಪಷ್ಟಪಡಿಸಲಾಗಿದೆ.

ಬಿ.ಇಡಿ ಪದವಿ ಕಡ್ಡಾಯ: ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008 ಫೆ. 4ರ ನಂತರ ನೇಮಕಗೊಂಡಿರುವ ವಿವಿಧ ವಿಷಯಗಳ ಉಪನ್ಯಾಸಕರಿಗೆ ಬಿ.ಇಡಿ ವ್ಯಾಸಂಗವನ್ನು ಕಡ್ಡಾಯಗೊಳಿಸಲಾಗಿದೆ. 2015ರ ಏಪ್ರಿಲ್ 9ರಂದು ಹೊರಡಿಸಿದ ಆದೇಶದಲ್ಲಿ, 2007 ಜ. 1ರಿಂದ ಆರು ವರ್ಷಗಳ ಅವಧಿಯಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸದಿದ್ದರೆ ಅಂಥವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಸೂಚಿಸಲಾಗಿತ್ತು.

ಇದೇ ಮಾರ್ಚ್ 5ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು, 2008ಕ್ಕೂ ಮೊದಲು ನೇಮಕಗೊಂಡ ಒಟ್ಟು 876 ಉಪನ್ಯಾಸಕರು ಅನುದಾನದ ವ್ಯಾಪ್ತಿಗೆ ಸೇರಿದ್ದಾರೆ. ಈ ಪೈಕಿ, 450 ಉಪನ್ಯಾಸಕರು ಸರ್ಕಾರ ಹೊರಡಿಸಿದ್ದ 2021ರ ಆದೇಶ ಪ್ರಕಾರ ಬಿ.ಇಡಿ ಪದವಿ ಪಡೆಯುವುದರಿಂದ ವಿನಾಯಿತಿ ಪಡೆದಿದ್ದಾರೆ. ನಿಧನ, ನಿವೃತ್ತಿ ಮತ್ತಿತರ ಕಾರಣಗಳಿಂದ 62 ಉಪನ್ಯಾಸಕರ ಹುದ್ದೆಗಳು ತೆರವಾಗಿವೆ. ಉಳಿದ 364 ಉಪನ್ಯಾಸಕರು ಬಿ.ಇಡಿ ಪದವಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಉಪನ್ಯಾಸಕರನ್ನು ಬಿ.ಇಡಿ ಪದವಿ ಪಡೆಯಲು ವೇತನಸಹಿತವಾಗಿ ನಿಯೋಜನೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.