ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಕೃತಿಚೌರ್ಯ ಪತ್ತೆಗೆ ದೇಸಿ ಸಾಫ್ಟ್‌ವೇರ್

Published 2 ಡಿಸೆಂಬರ್ 2023, 16:25 IST
Last Updated 2 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ಸಂಶೋಧನಾ ಪ್ರಬಂಧಗಳ ಕೃತಿಚೌರ್ಯ ಪತ್ತೆಗೆ ಬೆಂಗಳೂರು ವಿಶ್ವವಿದ್ಯಾಲಯ ಹೊಸ ಸಾಫ್ಟ್‌ವೇರ್‌ ಅಳವಡಿಸಿಕೊಂಡಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿರ್ದೇಶನದಂತೆ ಡ್ರಿಲ್ಬಿಟ್‌ ಸಂಸ್ಥೆಯ ದೇಸಿ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಲಾಗಿದ್ದು, ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗುವ ಸಂಶೋಧನಾ ಪ್ರಬಂಧಗಳು, ಸಂಶೋಧನಾ ಲೇಖನಗಳಲ್ಲಿ ಕೃತಿಚೌರ್ಯ ಮಾಡುವುದನ್ನು ಈ ಸಾಫ್ಟ್‌ವೇರ್‌ ಪತ್ತೆ ಮಾಡಲಿದೆ. ಶೋಧಶುದ್ದಿ ಮೂಲಕ ಕೃತಿಚೌರ್ಯದ ನಿಖರ ಫಲಿತಾಂಶ ನೀಡುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಪಾಲಕ ಬಿ.ಆರ್‌.ರಾಧಾಕೃಷ್ಣ ಮಾಹಿತಿ ನೀಡಿದ್ದಾರೆ.

2015ರಿಂದಲೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ’ಪ್ಲಾಗರಿಸಂ ಡಿಟೆಕ್ಷನ್‌ ಸಾಫ್ಟ್‌ವೇರ್‌ ಉಪಯೋಗಿಸಲಾಗುತ್ತಿತ್ತು. ಯುಜಿಸಿ‌ ನಿರ್ದೇಶನದಂತೆ ಇನ್ನುಮುಂದೆ ಡ್ರಿಲ್ಬಿಟ್‌ ಸಂಸ್ಥೆಯ ನೂತನ ಸಾಫ್ಟ್‌ವೇರ್ ಬಳಕೆ ಮಾಡಲಾಗುವುದು ಎಂದರು.

ಡ್ರಿಲ್ಬಿಟ್‌ ಸಂಪೂರ್ಣ ದೇಸಿ ನಿರ್ಮಿತ ಸಾಫ್ಟ್‌ವೇರ್‌. ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ರೂಪಿಸಲಾಗಿದೆ. ಇತರೆ ಸಾಫ್ಟ್‌ವೇರ್‌ಗಳಿಗಿಂತ ನಿಖರವಾಗಿ ಶೋಧಶುದ್ದಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT