ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಿಂದ ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲು ಆರಂಭ

Last Updated 26 ಜೂನ್ 2019, 19:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿ– ಬೆಂಗಳೂರು ನಡುವೆ ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಜೂನ್‌ 29ರಿಂದ ಸಂಚಾರ ಆರಂಭಿಸಲಿದೆ. ಇದರಿಂದ ಕುಂದಾನಗರಿ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಅಂದು ಸಂಜೆ ಆರು ಗಂಟೆಗೆ ಬೆಳಗಾವಿಯಲ್ಲಿ ಹೊಸ ರೈಲಿಗೆ ಚಾಲನೆ ನೀಡಲಿದ್ದಾರೆ. ನಿತ್ಯ ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಡುವ ರೈಲು ಮರುದಿನ ಬೆಳಿಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ.

ನಿತ್ಯ ಸಂಚರಿಸುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿಯಿಂದ ಬೆಂಗಳೂರು ತಲುಪಲು 12 ತಾಸು ತೆಗೆದುಕೊಳ್ಳುತ್ತದೆ. ಆದರೆ, ಈ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಹತ್ತು ಗಂಟೆಯಲ್ಲೇ ಬೆಂಗಳೂರು ಮುಟ್ಟಲಿದೆ.

ಧಾರವಾಡ (ರಾತ್ರಿ 11.10), ಹುಬ್ಬಳ್ಳಿ (ರಾತ್ರಿ 11.45), ದಾವಣಗೆರೆ (ಬೆಳಿಗಿನಜಾವ 1.58), ಅರಸೀಕೆರೆ (ಬೆಳಿಗ್ಗೆ 4.10), ತುಮಕೂರು (ಬೆಳಿಗ್ಗೆ 5.33) ಮತ್ತು ಯಶವಂತಪುರ (ಬೆಳಿಗ್ಗೆ 6.33) ನಿಲ್ದಾಣಗಳಲ್ಲಿ ನಿಲುಗಡೆ ಇದೆ. 29ರಿಂದ ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 7 ಗಂಟೆಗೆ ಬೆಳಗಾವಿ ಮುಟ್ಟಲಿದೆ. ಯಶವಂತಪುರ (ರಾತ್ರಿ 9.10), ತುಮಕೂರು (ರಾತ್ರಿ 10.08), ಅರಸೀಕೆರೆ (ರಾತ್ರಿ 11.25), ದಾವಣಗೆರೆ (ಬೆಳಗಿನ ಜಾವ 1.38), ಹುಬ್ಬಳ್ಳಿ (ಬೆಳಿಗ್ಗೆ 4.10) ಮತ್ತು ಧಾರವಾಡದಲ್ಲಿ (ಬೆಳಿಗ್ಗೆ 4.43) ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT