ಒಟ್ಟು ನಾಲ್ಕು ಪತ್ರಿಕೆಗಳ ಪೈಕಿ ಮೊದಲ ದಿನದ ಮೆಡಿಸಿನ್ ಪತ್ರಿಕೆಯನ್ನು ಬರೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯ ಒತ್ತಡದ ನಡುವೆಯೂ ಪರೀಕ್ಷೆ ಬರೆದಿದ್ದೇನೆ. ಇನ್ನೂ ಮೂರು ಪತ್ರಿಕೆಗಳು ಬಾಕಿ ಇವೆ. ಆದರೆ, ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಉಳಿದ ಮೂರು ಪತ್ರಿಕೆಗಳ ಪರೀಕ್ಷೆಯನ್ನು ಮುಂದಿನ ಬಾರಿ ಬರೆಯುತ್ತೇನೆ’ ಎಂದರು.