‘ಸರ್ಕಾರ ನೀಡಿರುವ ಮುಚ್ಚಳಿಕೆಯ ಬಗ್ಗೆ ಇನ್ನೂ ಯಾವುದೇ ತಾರ್ಕಿಕ ಅಂತ್ಯ ಕಾಣದಿರುವಾಗ ಮರು ಟೆಂಡರ್‌ಗೆ ಅಧಿಸೂಚನೆ ಹೊರಡಿಸಿ ಸರ್ಕಾರ ಕೈಗೊಂಡಿರುವ ನಿಲುವು ಎಷ್ಟು ಸಮರ್ಥನೀಯ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ತ್ಯಾಜ್ಯ ಸಂಗ್ರಹ ಎರಡನೇ ಹಂತದ ತ್ಯಾಜ್ಯ ವರ್ಗಾವಣೆ ರಸ್ತೆ ಗುಡಿಸಿದ ಕಸ ಸಂಗ್ರಹಿಸಲು 89 ಪ್ಯಾಕೇಜ್‌ಗಳ ಬದಲು 33 ವಿಭಾಗವಾರು ಪ್ಯಾಕೇಜ್‌ನ ಮರು ಟೆಂಡರ್ ಅನ್ನು ಬಿಎಸ್‌ಡಬ್ಲ್ಯುಎಂಎಲ್ ಮೇ 28ರಂದು ಆಹ್ವಾನಿಸಿತ್ತು. ಜೂನ್ 9ರಂದು ನಡೆದ ಪ್ರೀ–ಬಿಡ್ ಸಭೆಯಲ್ಲಿ ಚರ್ಚಿಸಲಾಗದಂತಹ ವಿನಾಯಿತಿ ಷರತ್ತುಗಳನ್ನು ವಿಧಿಸಿ ಹೊಸ ಅನುಬಂಧವನ್ನು ಎಂಜಿನಿಯರ್‌ಗಳು ಸೇರಿಸಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದರು.